ಮಂಡ್ಯ

23 ನೇ ವಿಶ್ವ ವಿಕಲಚೇತನರ ದಿನಾಚರಣೆ- ಡಾ.ವೀರಭದ್ರಪ್ಪ..!

Published

on

ಮಳವಳ್ಳಿ: ಮಳವಳ್ಳಿ ಪಟ್ಟಣದ ಸಮುದಾಯ ಆವರಣದಲ್ಲಿ ಗ್ರಾಮೀಣ ವಿಕಲಚೇತನರ ಪುನರ್ವಸತಿ ಯೋಜನೆ, ಮತ್ತು ಕೀರ್ತಿ ವಿಕಲಚೇತನರ ಕ್ಷೇಮಾಭಿವೃದ್ಧಿ ಹಾಗೂ ತಾಲ್ಲೂಕಿನ ಎಲ್ಲಾ ವಿಕಲಚೇತನರ ಸ್ವ ಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ 23 ನೇ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇನ್ನೂ ಈ ಕಾರ್ಯಕ್ರಮವನ್ನು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವೀರಭದ್ರಪ್ಪ ಉದ್ಘಾಟಿಸಿ ಮಾತನಾಡಿ, ವಿಕಲಚೇತನರಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ನೀಡುತ್ತಿದ್ದು ಅದನ್ನು ಪಡೆದುಕೊಂಡು ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.ವಿಕಲಚೇತನರಿಗೆ ಸರ್ಟಿಫಿಕೇಟ್ ಮಾಡಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ,ಅವರನ್ನು ಬಿಟ್ಟು ನೇರವಾಗಿ ನೀವುಗಳೇ ತಾಲ್ಲೂಕು ವೈದ್ಯಾಧಿಕಾರಿಗಳ ಬಳಿ ಹೋಗಿ, ವಿಕಲಚೇತನರಿಗೆ 21 ವಿವಿದ ಅಂಗವಿಕಲಕತೆ ಇದ್ದು, ಶೇಕಡಾವಾರು ನಿಗದಿಯನ್ನು ಸರ್ಕಾರ ಮಾಡಿದೆ ಅದರಂತೆ ನೀವು ಪಡೆದುಕೊಳ್ಳಬೇಕು ಎಂದು ತಿಳಿಸದರು. ಇನ್ನೂ ಈ ಕಾರ್ಯಕ್ರಮದಲ್ಲಿ ರಮಣ ಮಹಿರ್ಷಿ ಸಂಸ್ಥೆ ಕಾರ್ಯನಿರ್ವಾಹಣಾಧಿಕಾರಿ ಪಾರ್ಥಿಪನ್ ,ಸಮುದಾಯ ಸಂಸ್ಥೆಯ ಸಂಯೋಜಕಿ ನೀಲಾ, ಸಮುದಾಯ ಕಂಪ್ಯೂಟರ್ ಸೆಂಟರ್ ಮುಖ್ಯಸ್ಥ ಕೃಷ್ಣಮೂರ್ತಿ, ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷ ಭರತ್ ರಾಜ್, ಎ.ಎಸ್ ಪರಶಿವಮೂರ್ತಿ.ಎಸಿಡಿಪಿ ಓ ಮಹೇಶ್,ಮಹದೇವಸ್ವಾಮಿ, ಸೇರಿದಂತೆ ಮತ್ತಿತ್ತರರು ಭಾಗಿಯಾಗಿದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version