ಬಾಗಲಕೋಟೆ

ಪೊಲೀಸರ ಮೇಲೆ ಮಾಜಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ದರ್ಪ- ವಿಡಿಯೋ ವೈರಲ್..!

Published

on

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಹುನಗುಂದ ಮಾಜಿ ಕಾಂಗ್ರೆಸ ಶಾಸಕ ವಿಜಯಾನಂದ ಕಾಶಪ್ಪನವರ್ ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ದರ್ಪ ತೋರಿದ ವಿಡಿಯೋ ಈಗ ವೈರಲ್ ಆಗಿದ್ದು ಮಾಜಿ ಶಾಸಕನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೊಲೆ ಆರೋಪದಲ್ಲಿ ವಿಜಯಾನಂದ ಕಾಶಪ್ಪನವರ್ ಬೆಂಬಲಿಗರನ್ನು ಪೋಲಿಸ್ ಠಾಣೆಗೆ ಕರೆಸಿ ವಿಚಾರಿಸುತ್ತಿರುವಾಗ ತಮ್ಮ ಬೆಂಬಲಿಗರ ಬೆಂಬಲಕ್ಕೆ ಬಂದ ವಿಜಯಾನಂದ ಕಾಶಪ್ಪನವರ್ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸರ ಮೇಲೆ ದರ್ಪ ತೋರುವುದು ವಿಡಿಯೋದಲ್ಲಿ ಬಹಿರಂಗವಾಗಿದೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು, ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಸಿರುವ ಕಾರಣ ಇಳಕಲ್ ಪೊಲೀಸ್ ಠಾಣೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

ವರದಿ- ಶ್ರ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Click to comment

Trending

Exit mobile version