ತಿಪಟೂರು

ಮತ ಬಹಿಷ್ಕಾರಕ್ಕೆ ಜನಪ್ರತಿನಿಧಿಗಳೇ ನೇರ ಕಾರಣ- ಕೆ.ಟಿ ಶಾಂತಕುಮಾರ್..!

Published

on

ತಿಪಟೂರು: ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಭಾಗದ ಜನರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದು, ಇದಕ್ಕೆ ತಾಲ್ಲೂಕಿನಲ್ಲಿ ಆಯ್ಕೆಯಾಗಿ ಅಧಿಕಾರ ನಡೆಸಿದ ಜನಪ್ರತಿನಿಧಿಗಳೇ ನೇರ ಕಾರಣ ಎಂದು ಸಮಾಜ ಸೇವಕ ಕೆ.ಟಿ ಶಾಂತಕುಮಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಭಾಗದ ರೈತರು ಕೃಷಿ ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾದ ನೀರನ್ನು ಹರಿಸದಿದ್ದರೆ ಇವರ ಗತಿ ಏನು? ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮತದಾರರನ್ನು ದೇವರು ಎಂದು ಕರೆಯುತ್ತಾರೆ, ಮತ ಗಿಟ್ಟಿಸಿಕೊಂಡ ನಂತರ ಕೊಟ್ಟ ಆಶ್ವಾಸನೆ ಭರವಸೆಗಳನ್ನು ಮರೆಯುವುದು ಸರಿಯಲ್ಲ, ಹೊನ್ನವಳ್ಳಿ ಏತ ನೀರಾವರಿ ಸೇರಿದಂತೆ ಹಲವು ಯೋಜನೆಗಳನ್ನು ತಂದರೂ ಯಾವೊಂದು ಯೋಜನೆಗಳು ಫಲಪ್ರದವಾಗಿಲ್ಲ. ಈ ಭಾಗದ ಜನರು ಹನಿ ನೀರಿಗಾಗಿ ಪರದಾಡುವ ಸ್ಥಿತಿಗೆ ಇಲ್ಲಿನ ಜನಪ್ರತಿಗಳೆ ನೇರ ಕಾರಣರಾಗಿದ್ದಾರೆ. ಈಗಲಾದರೂ ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಹೊನ್ನವಳ್ಳಿ ಭಾಗಕ್ಕೆ ನೀರು ಹರಿಸುವ ಕೆಲಸ ಮಾಡಬೇಕು ಇಲ್ಲವಾದರೆ ಇಲ್ಲಿನ ರೈತರೊಂದಿಗೆ ಹೋರಾಟ ಕೈಗೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆಯನ್ನು ನೀಡಿದರು. ಇನ್ನೂ ಈ ಸಂದರ್ಭದಲ್ಲಿ ಸುದರ್ಶನ್, ಶಂಕರ್, ಹಾಲ್ಕುರ್ಕೆ, ದಿನೇಶ್ ಕುಮಾರ್ ಹರಿಸಮುದ್ರ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ವರದಿ-ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version