ಸಿನಿಮಾ

ಫಿನಾಲೆಗೆ ಬಾರದ ಬಿಗ್ ಬಾಸ್ ಸ್ಪರ್ಧಿಗೆ 10 ಲಕ್ಷ ಹಣ ನೀಡಿದ ಮೆಗಾಸ್ಟಾರ್ ಚಿರಂಜೀವಿ..!

Published

on

ಟಾಲಿವುಡ್ ನಟ ‘ಮೆಗಾ ಸ್ಟಾರ್’ಚಿರಂಜೀವಿ ಅವರು ‘ಬಿಗ್ ಬಾಸ್ ತೆಲುಗು ಸೀಸನ್ 4’ ವೇದಿಕೆಗೆ ಬಂದಿದ್ದರಿಂದ ಕಿರುತೆರೆ ಪ್ರೇಕ್ಷಕರ ಆಸಕ್ತಿ ಕೆರಳಿತ್ತು. ವಿನ್ನರ್ಗೆ ಟ್ರೋಫಿ ನೀಡಲು ಬಂದಿದ್ದ ಚಿರಂಜೀವಿ, ಅದರ ಜೊತೆಗೆ ಒಂದು ಸರ್ಪ್ರೈಸ್ ಕೂಡ ನೀಡಿದರು. ಫಿನಾಲೆಗೆ ಎಂಟ್ರಿ ನೀಡದ ಸ್ಪರ್ಧಿಯೊಬ್ಬರಿಗೆ 10 ಲಕ್ಷ ರೂ. ನೀಡಿದ್ದಾರೆ. ಬಿಗ್ ಬಾಸ್ ನಿರೂಪಕ ಅಕ್ಕಿನೇನಿ ನಾಗಾರ್ಜುನ ಜೊತೆ ಚಿರಂಜೀವಿಗೆ ಉತ್ತಮ ಬಾಂಧವ್ಯ ಇದೆ. ಆ ಕಾರಣಕ್ಕಾಗಿಯೇ ಅವರು ಫಿನಾಲೆಗೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಈ ವೇಳೆ ಅವರಿಗೆ ಬಿಗ್ ಬಾಸ್ ಸ್ಪರ್ಧಿ ಮೆಹಬೂಬ್ ಶೇಕ್ ಬಗ್ಗೆ ಅನುಕಂಪ ಮೂಡಿದೆ. ಡ್ಯಾನ್ಸರ್, ಯೂಟ್ಯೂಬರ್ ಆಗಿ ಕಷ್ಟ ಪಡುತ್ತಿರುವ ಮೆಹಬೂಬ್ಗೆ ಚಿರು ಬರೋಬ್ಬರಿ 10 ಲಕ್ಷ ರೂ. ನೀಡಿದ್ದಾರೆ.ಇದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಇಷ್ಟು ದೊಡ್ಡ ಮೊತ್ತದ ಬಹುಮಾನ ನೀಡಿದ್ದೂ ಅಲ್ಲದೆ, ವೇದಿಕೆ ಮೇಲೆಯೇ ಚಿರು ಭಾವುಕರಾದರು. ಮೆಹಬೂಬ್ರನ್ನು ತಬ್ಬಿಕೊಂಡು ತಮ್ಮ ಹಳೇ ದಿನಗಳನ್ನು ನೆನಪು ಮಾಡಿಕೊಂಡರು. ನೀವು ತುಂಬ ಒಳ್ಳೆಯ ವ್ಯಕ್ತಿ. ವೃತ್ತಿಜೀವನದ ಆರಂಭದಲ್ಲಿ ನಾನು ಪಟ್ಟ ಕಷ್ಟಗಳೆಲ್ಲ ನೆನಪಾಗುವಂತೆ ನೀವು ಮಾಡಿದ್ದೀರಿ’ಎಂದು ಚಿರು ಹಳೆಯ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version