ಸಿನಿಮಾ

ಮುಧುರೈನಲ್ಲಿರುವ ಶಾಲೆಯಲ್ಲಿ 200ಕ್ಕೂ ಅಧಿಕ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಕತ್ರಿನಾ ಕೈಫ್..!

Published

on

ಬಾಲಿವುಡ್ ನ ಹಾಟ್ ಬೆಡಗಿ ನಟಿ ಕತ್ರಿನಾಕೈಫ್ ಅವರ ಕೈಯಲ್ಲಿ ಇದೀಗ ಸಾಲುಸಾಲು ಸಿನಿಮಾಗಳಿವೆ. ಅಭಿನಯದ ಜೊತೆಗೆ ಕತ್ರಿನಾ ಕೆಲವು ಸಮಾಜಮುಖೀ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಇದೀಗ ಮಧುರೈನಲ್ಲಿರುವ ಎಲ್ಲಾ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ನಟಿ ಕತ್ರಿನಾಕೈಫ್ ಕಷ್ಟಪಡುತ್ತಿದ್ದಾರೆ.ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಲುವಾಗಿ ಕತ್ರಿನಾ ದೇಣಿಗೆ ಕೇಳುತ್ತಿದ್ದಾರೆ.ಕೈಲಾದ ಸಹಾಯ ಮಾಡುವಂತೆ ಎಲ್ಲರಲ್ಲೂ ಅವರು ಮನವಿ ಮಾಡಿಕೊಂಡಿದ್ದಾರೆ.ಕತ್ರಿನಾ ಕೈಫ್ ಅವರ ತಾಯಿ ಮಧುರೈನಲ್ಲಿ ಶಾಲೆಯೊಂದನ್ನು ಕಟ್ಟಿಸಿದ್ದಾರೆ. ಅಲ್ಲಿ ಸದ್ಯಕ್ಕೆ ನಾಲ್ಕನೇ ತರಗತಿವರೆಗೆ 200 ಮಕ್ಕಳು ಕಲಿಯುತ್ತಿದ್ದಾರೆ. ಹೆಚ್ಚಿನ ತರಗತಿಗಳನ್ನು ಆರಂಭಿಸಬೇಕು ಎಂಬ ಉದ್ದೇಶದೊಂದಿಗೆ ಕತ್ರಿನಾ ಶ್ರಮಿಸುತ್ತಿದ್ದಾರೆ.ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಶಾಲೆಯ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಸುವಂತಹ ವಿಡಿಯೋವೊಂದನ್ನು ಅವರು ಶೇರ್ ಮಾಡಿದ್ದಾರೆ.’ನಮ್ಮ ತಾಯಿ ಕಟ್ಟಿಸಿದ ಈ ಶಾಲೆಯ ವಿಷಯವನ್ನು ನಿಮಗೆ ತಿಳಿಸಲು ಹೆಮ್ಮೆ ಎನಿಸುತ್ತಿದೆ.ಮಧುರೈನಲ್ಲಿ ಇರುವ ಈ ಮೌಂಟೇನ್ ವೀವ್ ಶಾಲೆಯು 2015ರಿಂದ ಅವಕಾಶ ವಂಚಿತ ಮಕ್ಕಳಿಗೆ ಉತ್ತಮ ಗುಣಮಟ್ಟದ ಇಂಗ್ಲೀಷ್ ಮಿಡಿಯಂ ಶಿಕ್ಷಣ ನೀಡುತ್ತಿದೆ. ನಾವೆಲ್ಲರೂ ನಮ್ಮ ಕೈಲಾದ ಸಹಾಯ ಮಾಡೋಣ. ಆ ಮೂಲಕ ಇನ್ನಷ್ಟು ಮಕ್ಕಳಿಗೆ ಶಿಕ್ಷಣ ಸಿಗಲು ಸಾಧ್ಯವಾಗುತ್ತದೆ ಎಂದು ಕತ್ರಿಕಾಕೈಫ್ ಕೇಳಿಕೊಂಡಿದ್ದಾರೆ.

Click to comment

Trending

Exit mobile version