ಚಿಕ್ಕಬಳ್ಳಾಪುರ

ಬಾತುಕೋಳಿಗಳಿಂದ ಮಲಿನ ನೀರು ಸಂಸ್ಕರಣೆ..!

Published

on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಎಸ್.ಟಿ.ಪಿ ಘಟಕದ ವಿನೂತನ ಬಾತುಕೋಳಿಗಳಿಂದ ಮಲಿನ ನೀರನ್ನು ಸಂಸ್ಕರಣೆ ಮಾಡುವುದನ್ನು ಜಿಲ್ಲಾಧಿಕಾರಿ ಆರ್. ಲತಾ ವೀಕ್ಷಣೆ ಮಾಡಿದರು. ಇನ್ನೂ ಎಸ್.ಟಿ.ಪಿ ಘಟಕದ 6 ಪಾಂಡುಗಳ ಪೈಕಿ ಕೊನೆಯ ಎರಡು ಪಾಂಡುಗಳಲ್ಲಿ ಒಟ್ಟು ನೂರು ಬಾತು ಕೋಳಿಗಳನ್ನು ಬಿಡಲಾಗಿದೆ. ಈ ಬಾತುಕೋಳಿಗಳು ನೀರಿನಲ್ಲಿ ಚಲಿಸುವ ಮೂಲಕ ಮತ್ತು ರೆಕ್ಕೆಗಳನ್ನು ಬಡಿಯುವ ಮೂಲಕ ಆಮ್ಲಜನಕವನ್ನು ಮಲಿನ ಮಾಡಿ ನೀರಿನಲ್ಲಿ ನೈಸರ್ಗಿಕವಾಗಿ ಸೇರಿಸುತ್ತದೆ, ನೈಸರ್ಗಿಕವಾಗಿ ಇದರಿಂದ ಮಲಿನ ನೀರು ಶುದ್ಧೀಕರಣ ಗೊಳ್ಳುತ್ತದೆ,ಶುದ್ಧೀಕರಣಗೊಂಡ ನೀರನ್ನು ಜಿಲ್ಲಾಧಿಕಾರಿಗಳ ಕಚೇರಿ ಎಸ್ಪಿ ಕಚೇರಿಗೆ ಮತ್ತು ರೈತರುಗಳಿಗೆ ನೀಡಲು ಈ ಯೋಜನೆ ರೂಪಿಸಲಾಗುತ್ತದೆ. ಒಂದು ಬಾತುಕೋಳಿ ಒಂದು ವರ್ಷಕ್ಕೆ ಸರಾಸರಿ 300 ಮೊಟ್ಟೆಗಳನ್ನು ನೀಡಲಿದ್ದು,ಇದರಿಂದ ಬರುವ ಆರ್ಥಿಕತೆಯಿಂದ ಅಲ್ಲಿನ ನಿರ್ವಹಣೆಯನ್ನು ನಿರ್ವಹಿಸಲು ತಿರ್ಮಾನಿಸಿದ್ದು, ನಗರಸಭೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಾದ ಚಿಕನ್ ವೇಸ್ಟ್ ಮತ್ತು ತ್ಯಾಜ್ಯ ತರಕಾರಿಗಳನ್ನು ಬಾತು ಬಾತುಕೋಳಿಗಳಿಗೆ ನೀಡುವುದರಿಂದ ಅದು ಕೂಡ ಮೌಲ್ಯ ವರ್ಧನೆಯಾಗುತ್ತದೆ ಇನ್ನೂ ಈ ವೇಳೆ ಮಾನ್ಯ ಜಿಲ್ಲಾಧಿಕಾರಿಗಳೂ ಕೆರೆಗೆರ ಬೇಟಿ ನೀಡಿ ಬಾತುಕೋಳಿಗಳನ್ನು ವಿಕ್ಷೀಸಿ, ಈ ಸದರಿ ಕಾರ್ಯಕ್ರಮವು ಅತ್ಯಂತ ಸುಸ್ಥಿರ ಕಾರ್ಯಕ್ರಮವೆಂದು ತಿಳಿಸಿದರು.

ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version