ಚಿಕ್ಕಬಳ್ಳಾಪುರ

ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳ ದಿಡೀರ್ ದಾಳಿ..!

Published

on

ಚಿಕ್ಕಬಳ್ಳಾಪುರ: ನಗರಸಭಾ ವತಿಯಿಂದ ಅಂಗಡಿ ಮುಂಗಟ್ಟುಗಳಿಗೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರಿಗೆ ಸುಮಾರು ಎಂಟು ಸಾವಿರ ರೂಗಳ ದಂಡವನ್ನು ವಿಧಿಸಲಾಯಿತು.ಅಂಗಡಿ ಮುಂಗಟ್ಟುಗಳ ಮುಂದೆ ಬಿದ್ದಿರುವ ಕಸವನ್ನು ಅಂಗಡಿ ಮಾಲೀಕರ ಮೂಲಕವೇ ಗುಡಿಸಿ ಅವರ ಕಸದಬುಟ್ಟಿ ಗಳಿಗೆ ತುಂಬಿಸಲಾಯಿತು, ತದನಂತರ ಅಂಗಡಿ ಮಾಲೀಕರು ಕಟ್ಟುವ ದಂಡದಿಂದಲೇ ಹೊಸ ಕಸದ ಬುಟ್ಟಿಗಳನ್ನು ಖರೀದಿಸಿ ಅವರಿಗೆ ಹಿಂಪಡೆಯಲಾಗುತ್ತದೆ. ಈ ಮೂಲಕ ಎಲ್ಲಾ ಅಂಗಡಿ ಮಾಲೀಕರುಗಳಿಗೆ ತಮ್ಮ ಕಸವನ್ನು ನಗರಸಭಾ ವಾಹನಗಳಿಗೆ ನೀಡಲು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಇರಲು ನಗರಸಭೆ ಆಯುಕ್ತ ಲೋಹಿತ್ ಹಾಗೂ ಸಿಬ್ಬಂದಿಯವರು ಹೆಚ್ಚಿನದಾಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ನಗರಸಭಾ ಆಯುಕ್ತ ಲೋಹಿತ್ , ನಗರಸಭೆ ಅಧ್ಯಕ್ಷರು ಹಾಗೂ ಸಿಬ್ಬಂದಿಯವರು ಭಾಗಿಯಾಗಿದ್ದರು.

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version