ರಾಜಕೀಯ

2ನೇ ಹಂತದ ಗ್ರಾ.ಪಂ.ಚುನಾವಣೆ- ಮತದಾರರಿಗೆ ಅಕ್ರಮ ಮದ್ಯ-ಮಾಂಸ ವಿತರಣೆ..!

Published

on

ಲಿಂಗಸುಗೂರು:ಎರಡನೇ ಹಂತದ ಗ್ರಾ.ಪಂ.ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ಆಕಾಂಕ್ಷಿಗಳು ಮತದಾರರಿಗೆ ಆಮಿಷಗಳನ್ನು ನೀಡುವುದು ಹೆಚ್ಚಾಗುತ್ತಿದೆ. ಪ್ರತಿ ಮನೆಗೂ ಚಿಕನ್, ಮಟನ್, ಮಧ್ಯ ಸರಬರಾಜು ಮಾಡಲಾಗುತ್ತಿದೆ.ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ರಾಜಾರೋಷವಾಗಿ ಹಾಡು ಹಗಲೇ ಮಾಂಸದ ಪೊಟ್ಟಣಗಳನ್ನು ಕೊಂಡೊಯ್ಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನದೇ ಕಣ್ಮುಚ್ಚಿ ಕುಳಿತಿರುವುದು ಮಾತ್ರ ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ. ತಾಲೂಕಿನ ಗೋನಾವಾಟ್ಲಾ, ಗುಂತಗೋಳ, ಕಾಳಾಪೂರು, ಗೊರೆಬಾಳ, ಮಾವಿನಭಾವಿ, ಆನೆಹೊಸೂರು, ಈಚನಾಳ, ರೋಡಲಬಂಡಾ (ಯುಕೆಪಿ) ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸ್ಪರ್ಧಿಗಳು ಮತದಾರರನ್ನು ಸೆಳೆಯಲು ಹಲವು ತಂತ್ರಗಳನ್ನು ಬಳುಸುತ್ತಿದ್ದಾರೆ. ಒಂದು ಕುಟುಂಬದಲ್ಲಿ 2 ಮತಗಳಿದ್ದರೆ, ಒಂದು ಕೆಜಿ ಚಿಕ್ಕನ್ ಒಂದು ಕ್ವಾಟರ್ ಮಧ್ಯ ಹಾಗೂ 3 ಮತದಾರರು ಇದ್ದರೆ 2 ಕೆಜಿ ಚಿಕ್ಕನ್ 2 ಕ್ವಾಟರ್ ಎಣ್ಣೆ ಹಂಚುತ್ತಿದ್ದಾರೆ ಎಂದು ಮೂಲಗಕಲಿಂದ ತಿಳಿದು ಬಂದಿದೆ. ಪ್ರತಿಯೊಂದು ಗ್ರಾಮಗಳಲ್ಲಿನ ಹೋಟೆಲ್, ಪಾನ್ಶಾಪ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಜೋರಾಗಿ ಸಾಗಿದೆ. ಗ್ರಾಮದ ಯುವಕರು ಬೆಳ್ಳಂಬೆಳಿಗ್ಗೆ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದಾರೆ. ಹಗಲಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರು, ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಕ್ಕೆ ಸಾಥ್ ನೀಡುತ್ತಿದ್ದಾರೆ ಎನ್ನುವ ಮಾತುಗಳು ಜನರಲ್ಲಿ ಕಾಡುತ್ತಿದೆ. ಚುನಾವಣೆ ಮೊದಲು ಪ್ರತಿಯೊಂದು ಅಂಗಡಿಗಳಲ್ಲಿ ದಿನಕ್ಕೆ 80 ರಿಂದ 100 ಕೆಜಿ ಮಾರಾಟವಾಗುತ್ತಿತ್ತು.ಆದರೆ ಈಗ ದಿನಕ್ಕೆ 200 ರಿಂದ 300 ಕೆಜಿ ಚಿಕನ್ ಮಾರಾಟವಾಗುತ್ತಿದೆ. ಇದರಿಂದಾಗಿ ವ್ಯಾಪಾರಸ್ಥರು ಬೆಳಿಗ್ಗೆ 5 ಗಂಟೆಯಿಂದಲೇ ವ್ಯಾಪಾರ ಮಾಡಲು ಶುರುವಿಟ್ಟು ಕೊಂಡಿದ್ದಾರೆ. ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಿಂದಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.ಆದರೆ ಚುನಾವಣೆ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳದೇ ಕೈಕಟ್ಟಿಕೊಂಡು ಕುಳಿತ್ತಿದ್ದಾರೆ. ಅಲ್ಲದೇ ವಿವಿಧ ರಾಜಕೀಯ ಪಕ್ಷಗಳು ನೇರವಾಗಿ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾರೆ. ಅವರನ್ನು ನಿಯಂತ್ರಿಸುವಲ್ಲಿಯೂ ಸಹ ಅಧಿಕಾರಿಗಳು ವಿಫಲರಾಗಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ.

ವರದಿ- ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು.

Click to comment

Trending

Exit mobile version