ಹುಬ್ಬಳ್ಳಿ-ಧಾರವಾಡ

ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬಿಆರ್ ಟಿಎಸ್ ಯೋಜನೆಯ ಅವ್ಯವಸ್ಥೆ..!

Published

on

ಹುಬ್ಬಳ್ಳಿ: ಬಹು ನಿರೀಕ್ಷೆಯನ್ನು ಇಟ್ಟುಕೊಂಡು ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಪ್ರಾರಂಭಿಸಿದ್ದ ಬಿಆರ್ ಟಿಎಸ್ ಯೋಜನೆಯಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾದಂತಾಗಿದೆ. ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟಿ ಕೋಟಿ ಖರ್ಚು ಮಾಡಿ, ತ್ವರಿತ ಬಸ್ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಿ.ಆರ್.ಟಿ.ಎಸ್.ನಿರ್ಮಾಣ ಮಾಡಲಾಗಿತ್ತು. ಆದರೆ ಅಂದುಕೊಂಡ ರೀತಿಯಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿಲ್ಲ. ಕೆಲವೊಂದು ಚಿಗರಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗಲಿ ಎನ್ನುವ ದೃಷ್ಟಿಯಿಂದ ಲಿಫ್ಟ್, ಮೇಲ್ಸೇತುವೆ, ಅಂಡರ್ ಪಾಸ್, ವ್ಯವಸ್ಥೆಯನ್ನು ಮಾಡಿದ್ದಾರೆ. ಆದರೆ ಅದು ಉಪಯೋಗ ಮಾತ್ರ ಶೂನ್ಯ. ಇದಕ್ಕಾಗಿಯೇ ಸಾವಿರಾರು ಕೋಟಿ ರೂ ಖರ್ಚು ಮಾಡಿದ್ದು ವ್ಯರ್ಥವಾಗುತ್ತಿರುವ ಆರೋಪ ಮೇಲಿಂದ ಮೇಲೆ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಬಿಆರ್ ಟಿಎಸ್ ಆಡಳಿತ ಮಂಡಳಿ ಅವುಗಳ ನಿರ್ವಹಣೆ ಸರಿಯಾಗಿ ಮಾಡದೇ ಇರುವುದರಿಂದ ದಿನಕ್ಕೊಂದು ಸಮಸ್ಯೆ ಉದ್ಭವವಾಗುತ್ತಿದೆ.ಇನ್ನೂ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಇಳಿದ ಕೂಡಲೇ, ಹಾಗೂ ಬಸ್ ನಿಲ್ದಾಣಕ್ಕೆ ಬರಲು ಅನುಕೂಲವಾಗಲಿ ಎಂದು ಹುಬ್ಬಳ್ಳಿಯ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣ, ಉಣಕಲ್ಲ ಕ್ರಾಸ್, ಉಣಕಲ್ಲ ಕೆರೆ ಬಳಿ ಹಾಗೂ ನವನಗರ , ರಾಯಾಪುರ ಇಸ್ಕಾನ್ ದೇವಸ್ಥಾನ,ಎಸ್ ಡಿಎಂ ಆಸ್ಪತ್ರೆ ಬಳಿ ಎಫ್ಓಬಿ ನಿರ್ಮಿಸಿ ಲಿಫ್ಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ಆದರೆ,ಲಿಫ್ಟ್ ಆಪರೇಟರ್ ಇರಬೇಕಾಗಿತ್ತು ಆದ್ರೆ ಅಲ್ಲಿ ವ್ಯವಸ್ಥೆ ಕಾಣಸಿಗದ ಕಾರಣ ಜನರು ಕೈಯಲ್ಲಿ ಜೀವ ಇಟ್ಟುಕೊಂಡು, ರಸ್ತೆ ದಾಟಿ ಬಸ್ ನಿಲ್ದಾಣ ಮುಟ್ಟುವಂತಹ ಪರಿಸ್ಥಿತಿ ಎದುರಾಗಿದೆ. ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾವಿರಾರು ಕೋಟಿ ಖರ್ಚು ನಿರ್ಮಾಣ ಮಾಡಿರುವ ಬಿಆರ್ ಟಿಎಸ್ ಯೋಜನೆಯ ಅವ್ಯವಸ್ಥೆಯನ್ನು ಸರಿಪಡಿಸಿ ಅನುಕೂಲ ಮಾಡಿಕೊಡಬೇಕಾಗಿದೆ.

ವರದಿ- ರಾಜು ಮುದಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version