ಹುಬ್ಬಳ್ಳಿ-ಧಾರವಾಡ

ಕ್ರಿಬ್ ನಿರ್ಮಿಸಿ ಕ್ರಿಸ್ಮಸ್ ಹಬ್ಬಕ್ಕೆ ಹೊಸ ಮೆರಗು..!

Published

on

ಹುಬ್ಬಳ್ಳಿ; ಕೊರೊನಾ ಸಂಕಷ್ಟದಿಂದಾಗಿ ಈ ಬಾರಿಯ ಕ್ರಿಸ್ಮಸ್ ಆಚರಣೆ ಬಹಳ ವಿಭಿನ್ನವಾಗಿದೆ. ಪ್ರತಿ ವರ್ಷದಂತೆ ಈ ಬಾರಿ ದೂರದ ಕುಟುಂಬಸ್ಥರ ಜೊತೆ, ಇಲ್ಲವೇ ಪ್ರೀತಿ ಪಾತ್ರರ ಜೊತೆ ಸೇರಿ, ಹಬ್ಬ ಆಚರಣೆ ಮಾಡೋಕೆ ಸಾಧ್ಯವಿಲ್ಲ. ಹೀಗಾಗಿ ನಗರದ ವಿಕಾಸನಗರದ ರೇಷ್ಮಾ ಫರ್ನಾಂಡಿಸ್ ಕುಟುಂಬಸ್ಥರು ಸೇರಿಕೊಂಡು ತಮ್ಮ ನಿವಾಸದಲ್ಲಿ ಕ್ರಿಬ್ ನಿರ್ಮಾಣ ಮಾಡಿ ಸರಳ ರೀತಿಯಲ್ಲಿ ಹಬ್ಬ ಆಚರಿಸಿದ್ದಾರೆ. ಡಿಸೆಂಬರ್ ತಿಂಗಳು ಎಂದರೇ ಮೊದಲಿಗೆ ನೆನಪಿಗೆ ಬರುವುದೇ ಕ್ರಿಸ್ಮಸ್, ಈ ಹಬ್ಬ ಕೇವಲ ನಮ್ಮ ದೇಶವಷ್ಟೇ ಅಲ್ಲ, ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದರ ಮಧ್ಯೆ ಇಂಟರ್ನೆಟ್, ಮೊಬೈಲ್, ಕಂಪ್ಯೂಟರ್ನಂತಹ ತಂತ್ರಜ್ಞಾನಗಳ ಬಳಕೆಯ ಹಾವಳಿಯಿಂದ ಸಮಾಜದಲ್ಲಿ ಪರಸ್ಪರ ಕುಟುಂಬಗಳ ನಡುವೆ ಶಾಂತಿ-ಸಮಾಧಾನ, ಸಂಬಂಧಗಳ ಒಗ್ಗಟ್ಟು ಹಾಳಾಗುತ್ತಿದೆ. ಇದನ್ನು ಸುಧಾರಿಸುವ ಉದ್ದೇಶದಿಂದ ರೇಷ್ಮಾ ಫರ್ನಾಂಡೀಸ್ ಧರ್ಮಶಾಸ್ತ್ರದ ಪ್ರಕಾರ ಕ್ರಿಬ್ ಬತ್ತದ ಹುಲ್ಲು, ಲಾಳದ ಕಡ್ಡಿ ಮತ್ತಿತರ ವಸ್ತುಗಳಿಂದ ತಯಾರಿಸಿದ ತೊಟ್ಟಿಲು ಮಾದರಿ, ಮತ್ತು ದೂತನ ಸಂಕೇತವಾಗಿ ನಕ್ಷತ್ರಗಳು ಕ್ರಿಸ್ಮಸ್ಗೆ ಪವಿತ್ರವಾದ ಎಂಬ ನಂಬಿಕೆಯಿಂದ, ತಮ್ಮ ಮನೆಯಲ್ಲಿ ಕ್ರಿಬ್ ಗಳನ್ನು ನಿರ್ಮಿಸಿ ಕ್ರಿಸ್ ಮಸ್ ಆಚರಣೆಗೆ ಮುಂದಾಗಿದ್ದಾರೆ.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version