ಚಿಕ್ಕಬಳ್ಳಾಪುರ

ಸ್ಕೇಟಿಂಗ್ ಪಂದ್ಯದಲ್ಲಿ ಮಾನ್ಯತೆ ಪಡೆಯದ ಕ್ಲಬ್ ವಿರುದ್ದ ಗುಡುಗಿದ ಎಂಡಿ ಜಬಿವುಲ್ಲಾ..!

Published

on

ಚಿಕ್ಕಬಳ್ಳಾಪುರ: ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಂಡಿ ಜಬಿಉಲ್ಲಾ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಾನ್ಯತೆ ಪಡೆಯದ ಕ್ಲಬ್ ವತಿಯಿಂದ ನಡೆಸುತ್ತಿರುವ ಸ್ಕೇಟಿಂಗ್ ಪಂದ್ಯಾವಳಿಗಳಿಂದ ಪೋಷಕರನ್ನು ದಿಕ್ಕುತಪ್ಪಿಸುವ ಕಾರ್ಯ ನೀಡುತ್ತಿದೆ.ಇದರ ಬಗ್ಗೆ ತನಿಖೆ ನಡೆಸಬೇಕೆಂದು ಸಚಿವರಾದ ಡಾ.ಕೆ. ಸುಧಾಕರ್ ಅವರಿಗೆ ಮನವಿಯನ್ನು ಕೊಟ್ಟಿದ್ದೇವೆ, ಜಿಲ್ಲಾ ರೂರಲ್ ಸ್ಕೇಟಿಂಗ್ ಅಸೋಸಿಯೇಷನ್ ಇಂದ ಮಾನ್ಯತೆ ಪಡೆದಿದ್ದು. ಈ ಸಂಸ್ಥೆಯು ಕಳೆದ 13 ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿದೆ.ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಮಾನ್ಯತೆ ಪಡೆಯದ ಕ್ಲಬ್ ವತಿಯಿಂದ ಸ್ಕೇಟಿಂಗ್ ಪಂದ್ಯಾವಳಿಗಳಲ್ಲಿ ಪೋಷಕರನ್ನು ದಿಕ್ಕು ತಪ್ಪಿಸುವ ಕಾರ್ಯ ನಡೆಸುತ್ತಿದೆ. ಈ ಸ್ಕೇಟಿಂಗ್ ಪಂದ್ಯಾವಳಿ ಸಂಸ್ಥೆಯಿಂದ ಪೋಷಕರಲ್ಲಿ ಮನವಿ ಏನೆಂದರೆ ಮಾನ್ಯತೆ ಪಡೆಯದ ಕ್ಲಬ್ ಗಳು ನಡೆಸುವ ಯಾವುದೇ ಪಂದ್ಯಾವಳಿಗಳಲ್ಲಿ ನಿಮ್ಮ ಮಕ್ಕಳು ಭಾಗವಹಿಸುವುದರಿಂದ ಸರ್ಕಾರದಿಂದ ಸಿಗುವಂತಹ ಯಾವುದೇ ರೀತಿಯಲ್ಲಿ ಸೌಲಭ್ಯ/ಅನುಕೂಲಗಳು ನಿಮ್ಮ ಮಕ್ಕಳಿಗೆ ಸಿಗುವುದಿಲ್ಲ ಆದ ಕಾರಣ ಮಾನ್ಯತೆ ಪಡೆಯದ ಕ್ಲಬ್ ಗಳಿಗೆ ಪೋಷಕರು ಪ್ರೋತ್ಸಾಹ ನೀಡಬಾರದೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version