ಸಿನಿಮಾ

ದರ್ಶಕ್ ಗೌಡ ಹಾಗೂ ಶಿಲ್ಪಾರವಿ ಮನೆಗೆ ಹೊಸ ಅತಿಥಿಯ ಆಗಮನ..!

Published

on

ಕಿರುತೆರೆಯಲ್ಲಿ ಫುಲ್ ಬ್ಯುಸಿಯಾಗಿದ್ದ ಶಿಲ್ಪಾರವಿ ಮತ್ತು ದರ್ಶಕ್ ಗೌಡ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆಯನ್ನು ಪಡೆದು ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಜೋಡಿ ಎರಡು ಕಾರಣಕ್ಕೆ ಸಂಭ್ರಮದ ಮೂಡ್ನಲ್ಲಿದ್ದಾರೆ. ಅವರ ಮದುವೆಯಾಗಿ ಒಂದು ತಿಂಗಳು ಕಳೆದಿದೆ. ಇದರ ಜೊತೆಗೆ ಹೊಸ ಕಾರ್ ಕೂಡ ಖರೀದಿ ಮಾಡಿದ್ದಾರೆ. ಕ್ರಿಸ್ಮಸ್ ದಿನವೇ ಅವರ ಮನೆಗೆ ಹೊಸ ಕಾರ್ ಬಂದಿದ್ದು, ಶಿಲ್ಪಾ ರವಿ ಹಾಗೂ ಅವರ ಗಂಡ ನಟ ದರ್ಶಕ್ ಗೌಡ ಕಾರ್ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಾರ್ ಜೊತೆಗಿರುವ ಫೋಟೋ ಹಂಚಿಕೊಂಡು ಪತ್ನಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನೂ ಈ ದಂಪತಿಗೆ ಅನೇಕರು ಶುಭಾಶಯವನ್ನು ಕೋರಿದ್ದಾರೆ. ದರ್ಶಕ್ ಗೌಡ ಅವರಿಗೆ ಬೈಕ್ ರೈಡಿಂಗ್, ಟ್ರಿಪ್ ಹೋಗೋದು ಅಂದರೆ ತುಂಬ ಇಷ್ಟ. ‘ಎಲ್ಲರೂ ಆರಾಮಾಗಿ ಹುಷಾರಾಗಿ ಹಾಲಿಡೇ ಕಳೆಯಿರಿ, ಸುರಕ್ಷಿತವಾಗಿರಿ’ ಎಂದು ದರ್ಶಕ್ ಗೌಡ ಹೇಳಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶಿಲ್ಪಾ ರವಿ ನಟಿಸುತ್ತಿದ್ದು,ದರ್ಶಕ್ ಗೌಡ ಅವರು ‘ಕಾವ್ಯಾಂಜಲಿ’ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಇನ್ನು ದರ್ಶಕ್ ಅವರು ಅವರ ಬೈಕ್ಗೆ Kal-El ಎಂದು ಹೆಸರಿಟ್ಟಿದ್ದಾರೆ. ಇದರರ್ಥ ದೇವರ ಧ್ವನಿಯಂತೆ. ಇನ್ನು ಶಿಲ್ಪಾಗೂ ಕೂಡ ಟ್ರಿಪ್ ಹೋಗೋದು ಅಂದರೆ ತುಂಬ ಇಷ್ಟವಂತೆ ಆಗಾಗಿ ಈ ಜೋಡಿ ಹೊಸ ಕಾರ್ ನಲ್ಲಿ ಜಾಲಿಯಾಗಿ ಒಂದು ಟ್ರೀಪ್ ಹೋಗಿ ಬರಲಿದೆಯಂತೆ. ಇನ್ನೂ ಈ ಜೋಡಿ ಇದೇ ನವೆಂಬರ್ 25ರಂದು ಶಿಲ್ಪಾ ಅವರು ನಟ ದರ್ಶಕ್ ಗೌಡ ಜೊತೆ ಬೆಂಗಳೂರಿನಲ್ಲಿಯೇ ಸಪ್ತಪದಿ ತುಳಿದಿದ್ದರು. ಈ ಮದುವೆಗೆ ಸ್ಯಾಂಡಲ್ವುಡ್ ಕಲಾವಿದರು ಆಗಮಿಸಿ ಶುಭಾಶಯವನ್ನು ತಿಳಿಸಿದ್ದರು.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version