ಹುಬ್ಬಳ್ಳಿ-ಧಾರವಾಡ

ವೈದ್ಯಕೀಯ ಕಾಲೇಜು ನಿರ್ಮಾಣ ಕಾನೂನು ಬಾಹೀರ : ಹಿರೇಮಠ ಆರೋಪ..!

Published

on

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಶ್ರೀ ಮೂರು ಸಾವಿರ ಮಠದ ಜಾಗದಲ್ಲಿ ಕೆಎಲ್ ಇ ಸಂಸ್ಥೆ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿರುವುದು, ಇದು ಕಾನೂನು ಬಾಹೀರ ಎಂದು ಶ್ರೀಮಠದ ಭಕ್ತ ಆನಂದಯ್ಯ ಹಿರೇಮಠ ಆರೋಪಿಸಿದ್ದರು.ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಶ್ರೀಮಠವು ಕೆಎಲ್ ಇ ಸಂಸ್ಥೆಗೆ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಭೂಮಿಯನ್ನು ದಾನವಾಗಿ ನೀಡಿದ್ದು,ಇದು ಕಾನೂನು ಬಾಹೀರವಾಗಿದೆ ಪ್ರಸ್ತುತ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ಹಾಗೂ ಕೆಎಲ್ಇ ಸಂಸ್ಥೆಯವರು ಸೇರಿ ಕಾಲೇಜು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದೂ ಕೂಡ ಕಾನೂನುಬಾಹೀರವಾಗಿದ್ದು, ಇಲ್ಲಿ ರಾಜಕೀಯ ದುರ್ಬಳಕೆ ನಡೆಯುತ್ತಿದೆ ಎಂದು ಆರೋಪಿಸಿದರು. ಮಠದ ಜಾಗ ಪಡೆದು ಕೆಎಲ್ ಇ ಸಂಸ್ಥೆ ವ್ಯಾಪಾರ ಮಾಡುತ್ತಿದೆ. ಉಚಿತವಾಗಿ ಸೇವೆ ನೀಡುತ್ತೇವೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತೇವೆ ಎಂದು ಎಲ್ಲಿಯೂ ತಿಳಿಸಿಲ್ಲ ಎಂದರು. ಕಾಲೇಜು ನಿರ್ಮಾಣಕ್ಕೆ ಕೆಎಲ್ ಇ ಸಂಸ್ಥೆಗೆ ನೀಡಿದ ಜಾಗವನ್ನು ಶ್ರೀಗಳು ಕೂಡಲೇ ವಾಪಸ್ ಪಡೆದುಕೊಳ್ಳಬೇಕು ಎಂದು ಮಠದ ಭಕ್ತ ಆನಂದಯ್ಯ ಹಿರೇಮಠ ಹೇಳಿದರು.

ವರದಿ-ರಾಜು ಮುದುಗಲ್ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version