ಮಂಡ್ಯ

ಶಂಕರ ಮಠಕ್ಕೆ ವೀರಶೈವ ಲಿಂಗಾಯತ ಮಂಡಳಿಯ ಅಧ್ಯಕ್ಷ ಬಿ.ಎಂ ಪರಮಶಿವಯ್ಯ ಭೇಟಿ..!

Published

on

ಮಳವಳ್ಳಿ; ಮಳವಳ್ಳಿ ಪಟ್ಟಣದ ಕೋಟೆ ಬೀದಿಯಲ್ಲಿರುವ ಶಂಕರ ಮಠಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಬಿ.ಎಂ ಪರಮಶಿವಯ್ಯ ರವರು ಭೇಟಿ ನೀಡಿ ಶಂಕರ ಮಠದ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಜೀ ಆಶೀರ್ವಾದ ಪಡೆದು ಕೊಂಡರು. ಇನ್ನೂ ಇದೇ ವೇಳೆ ಶಂಕರ ಮಠದ ವತಿಯಿಂದ ವೀರಶೈವ ಲಿಂಗಾಯತ ಮಹಾಸಭಾ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಬಿ.ಎಂ ಪರಮಶಿವಯ್ಯ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಬಳಿಕ ಬಿ.ಎಂ ಪರಮಶಿವಯ್ಯ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಮುಂದುವರಿದಿದೆ ಎಂಬ ಹಣೆ ಪಟ್ಟಿ ಇದೆ ಆದರೆ ಯಾವ ಹಂತದಲ್ಲೂ ಮುಂದುವರಿದಿಲ್ಲ ಇನ್ನೂ ಹಿಂದುಳಿದವರು ಶೇಕಡಾವಾರು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಅವರನ್ನು ಗುರುತಿಸಿ ಬಳಿಕ ಸಮಾಜವನ್ನು ಅಭಿವೃದ್ಧಿಯ ಗುರಿಯಾಗಿದೆ ಎಂದರು. ಈ ವೇಳೆ ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮಿಜಿಯವರ ದ್ವಿತೀಯ ವರ್ಷದ ಪುಣ್ಯ ಸಂರಣೋತ್ಸದ ಪ್ರಯುಕ್ತ ಕಂತೆ ಬಿಕ್ಷೆ ಸೇವೆಯ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಶಂಕರ ಮಠದ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಜೀಯವರು ಮಾತನಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಕಳೆದ ಭಾರಿ ಅಧಿಕಾರದಲ್ಲಿದ್ದಾಗ ಮಠಮಾನ್ಯಗಳಿಗೆ ಅನುದಾನು ನೀಡಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.ಇನ್ನೂ ಈ ಸಂಧರ್ಭದಲ್ಲಿ ಶ್ಯಾಮ್ ನಾಯ್ಡ , ಪ್ರಭುದೇವ, ಮಲ್ಲೇಶ್, ಸುರೇಶ, ಪರಶಿವಮೂರ್ತಿ ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version