Uncategorized

ಶರಣರ ವಿಚಾರಧಾರೆಗಳೆ ಬದುಕಿಗೆ ಸ್ಫೂರ್ತಿ – ಶಿವಣ್ಣ ಇಜೇರಿ..!

Published

on

ಶಹಾಪುರ: ವೈಜ್ಞಾನಿಕ ವಿಚಾರಧಾರೆಯನ್ನೊಳಗೊಂಡ ಶರಣ ಸಾಹಿತ್ಯ,ಶರಣ ಸಂಸ್ಕೃತಿಯ ಪ್ರತೀಕವಾದ ಕಾಯಕ, ನಿಷ್ಠೆ, ಹಾಗೂ ಬಸವಾದಿ ಶರಣರ ತತ್ವಾದರ್ಶಗಳೇ ನನ್ನ ಬದುಕಿಗೆ ಸ್ಫೂರ್ತಿ ಎಂದು ಹಿರಿಯ ಸಾಹಿತಿ ಶಿವಣ್ಣ ಇಜೇರಿ ಹೇಳಿದರು. ನಗರದ ಕುಂಬಾರ ಓಣಿಯ ಕಾಯಕ ನಿಲಯದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಭಾಗವಹಿಸಿ ತಮ್ಮ ಮನದಾಳದ ಮಾತುಗಳನ್ನಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿವಣ್ಣ ಇಜೇರಿ ಅವರು ಒಬ್ಬ ನೇರ, ದಿಟ್ಟ, ನಿರಂತರ, ಇದ್ದ ವಿಷಯವನ್ನು ಇದ್ದ ಹಾಗೆಯೇ ಹೇಳುವ ನಿಷ್ಟುರ, ಯಾರಿಗೂ ಅಂಜದೆ ಅಳುಕದೆ ನೇರವಾಗಿ ನುಡಿಯುವ ಶರಣ ಸಾಹಿತಿ ಎಂದು ಹೇಳಿದರು. ಅವರು ಬಹಳ ಕಡು ಬಡತನದಿಂದ ಬಂದವರು ಸುಮಾರು 4೦ ವರ್ಷಗಳ ಕಾಲ ಒಂದೇ ಅಂಗಡಿಯಲ್ಲಿ ಗುಮಾಸ್ತನಾಗಿ ಇಂದಿಗೂ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು, ಕಾಯಕದಲ್ಲಿ ಅವರಿಗಿರುವ ನಂಬಿಕೆ, ವಿಶ್ವಾಸ, ಅವರಲ್ಲಿ ಕಾಣಬಹುದು ಎಂದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಹಿರಿಯ ಸಾಹಿತಿ ಡಾ:ಅಬ್ದುಲ್ ಕರೀಂ ಕನ್ಯಾಕೋಳೂರ ಮಾತನಾಡಿ ಶಿವಣ್ಣ ಇಜೇರಿ ಯವರ ಸಾಹಿತ್ಯ ಬಹಳ ಮೊನಚಾದ ಬರಹಗಳ ಜೊತೆಗೆ ಸಮಾಜದ ಓರೆಕೋರೆಗಳನ್ನು ತಿದ್ದಿ ಬಹುಬೇಗ ಜನಸಾಮಾನ್ಯರನ್ನು ತಲುಪಿ ಜನಪ್ರಿಯತೆ ಪಡೆಯುವ ಸಾಹಿತ್ಯವಾಗಿದೆ ಎಂದು ನುಡಿದರು, ಸೌಮ್ಯ ಹಾಗೂ ಮುಗ್ಧ ಮನಸ್ಸಿನ ಹಿರಿಯ ಭಾವ ಜೀವಿ ಎಂದು ಬಣ್ಣಿಸಿದರು.ಅವರು ರಚಿಸಿದ 5 ಕೃತಿಗಳು ಉಡಿಯಲ್ಲಿಯ ಉರಿ, ಕರಗದ ಬೆಣ್ಣೆ, ಕಣ್ಮರೆಯ ಬೆಳಕು, ಆಧುನಿಕ ವಚನಗಳು, ದಾರಿದೀಪ, ಬಹಳ ಅರ್ಥಪೂರ್ಣವಾಗಿ ಹೊರಬಂದಿವೆ ಅಷ್ಟೇ ಮಾರ್ಮಿಕವಾಗಿ ಅದರಲ್ಲಿ ವಿಷಯ ಕೂಡ ಅಡಗಿದೆ ಇಂದಿನ ವಾಸ್ತವ ಬದುಕಿಗೆ ಈ ಕೃತಿಗಳು ಸ್ಫೂರ್ತಿಯಾಗಿವೆ ಎಂದರು.ಇನ್ನೂ ಅತಿಥಿಗಳಾಗಿ ಆಗಮಿಸಿದ ಡಾ.ಗೋವಿಂದರಾಜ ಆಲ್ದಾಳ ಮಾತನಾಡಿ ಶಿವಣ್ಣ ಇಜೇರಿ ಅವರು ಶಿಕ್ಷಣ ಅಲ್ಪಸ್ವಲ್ಪ ಪಡೆದರೂ ಸಾಹಿತ್ಯಿಕವಾಗಿ ಅಪಾರ ಜ್ಞಾನ ಭಂಡಾರೆ ಅವರಲ್ಲಿ ಅಡಗಿದೆ ಬದುಕಿನ ದುದ್ದಕ್ಕೂ ಶರಣರ ಚಿಂತನೆಗಳನ್ನು ಮೈಗೂಡಿಸಿ ಕೊಂಡಿದ್ದಾರೆ, ಇದಕ್ಕೆಲ್ಲಾ ಕಾರಣ ಶರಣ ಸಾಹಿತಿ ಲಿಂಗಣ್ಣ ಸತ್ಯಂ ಪೇಟೆಯವರ ಒಡನಾಟ, ಅವರೊಬ್ಬ ನುಡಿದಂತೆ ನಡೆಯುವ ವ್ಯಕ್ತಿ ಒಂದೇ ನೆಲೆಗಟ್ಟಿನಲ್ಲಿರುವ ಬದುಕು ಮತ್ತು ಬರಹ ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರು. ಟ್ರಸ್ಟ್ನ ಅಧ್ಯಕ್ಷರಾದ ಬಸವರಾಜ ಸಿನ್ನೂರ ಮಾತನಾಡಿ ನಾಡಿನ ಹಿರಿಯ ಸಾಹಿತಿಗಳನ ಸಂಶೋಧಕರನ ಸಾಧಕರನ್ನ ಗುರುತಿಸಿ ಗೌರವಿಸಿ ಅವರನ್ನು ಕರೆತಂದು ನಾಡಿಗೆ ಪರಿಚಯಿಸುವುದೇ ಈ ಮನೆಯಂಗಳದ ಮಾತುಕತೆಯ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ, ಮುಂಬರುವ ದಿನಗಳಲ್ಲಿ ನಿರಂತರವಾಗಿ ಈ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗಬೇಕೆಂಬ ಕಾಯಕಲ್ಪ ನಮ್ಮದಾಗಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡು ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Click to comment

Trending

Exit mobile version