Uncategorized

ನಿಂಬೆ ನಾಡಿನಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಪೂರ್ವ ಸಿದ್ದತೆ…!

Published

on

ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ಸಿದ್ದತೆಯಲ್ಲಿ ಅಧಿಕಾರಿಗಳು ತೊಡಗಿಕೊಂಡಿದ್ದರು. ಪಟ್ಟಣದ ಆದರ್ಶ ಶಾಲಾ ಆವರಣದ ಕೋಠಡಿಗಳಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ,ಚುನಾವಣೆ ಪರಿಕರಗಳನ್ನು ಪರಿಶೀಲಿಸಿದ ನಂತರ ನಿಯೋಜಿಸಿರುವ ಮತಗಟ್ಟೆಗಳಿಗೆ ತೆರಳಿದರು. ಒಟ್ಟು 38 ಗ್ರಾಮ ಪಂಚಾಯತ್ ಗಳಿಗೆ 324 ಮತಗಟ್ಟೆಗಳು, ಸೂಕ್ಷ್ಮ ಅತೀ ಸೂಕ್ಷ್ಮ 33 ಮತಗಟ್ಟೆಗಳು ಮಾಡಲಾಗಿದೆ.1400 ಚುನಾವಣೆ ಸಿಬ್ಬಂದಿ, 450 ಪೋಲಿಸ್ ಸಿಬ್ಬಂದಿ ಹಾಗೂ 17 ಸರಕಾರಿ ಬಸ್ 7 ಖಾಸಗಿ ವಾಹನಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಇನ್ನೂ ಆರೋಗ್ಯದ ಹಿತದೃಷ್ಟಿ ವ್ಯವಸ್ಥೆಯಿಂದ ಮಾಸ್ಕ ಮತ್ತು ಸಾನಿಟೈಜರ್ ಕಡ್ಡಾಯವಾಗಿ ಮಾಡಲಾಗಿದೆ ಎಂದು ತಹಶಿಲ್ದಾರ ಸಿ ಕುಲಕರ್ಣಿ ತಿಳಿಸಿದ್ದಾರೆ.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Click to comment

Trending

Exit mobile version