ಹುಬ್ಬಳ್ಳಿ-ಧಾರವಾಡ

ನನಗೆ ಜೀವ ಭಯವಿದೆ ರಕ್ಷಣೆ ಕೋರಿದ್ರು ನನಗೆ ಸರ್ಕಾರ ರಕ್ಷಣೆ ನೀಡಿಲ್ಲ- ದಿಂಗಾಲೇಶ್ವರ ಶ್ರೀ..!

Published

on

ಹುಬ್ಬಳ್ಳಿ: ಮೂರು ಸಾವಿರ ಮಠದ ಆಸ್ತಿ ವಿಚಾರದಲ್ಲಿ ನೀವು ಹೆಚ್ಚಿಗೆ ಮಾತನಾಡಿದ್ರೆ ನಿಮ್ಮನು ಬಿಡುವುದಿಲ್ಲ ಎಂದು ನನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳು ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿಂದು ಮೂರು ಸಾವಿರ ಮಠದ ಆಸ್ತಿ ಪರಭಾರೆ ಬಗ್ಗೆ ದಾಖಲಾತಿ ಬಿಡುಗಡೆ ಮಾಡಿ ಮಾತನಾಡಿದ ಅವರು ನನಗೆ ಜೀವ ಭಯವಿದೆ, ಸರ್ಕಾರದಿಂದ ರಕ್ಷಣೆ ಸಿಗುತ್ತಿಲ್ಲ,ರಕ್ಷಣೆ ಕೊಡಿ ಎಂದು ಹಲವು ಸಲ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ. ಆದ್ರೂ ಸರ್ಕಾರ ರಕ್ಷಣೆ ನೀಡಿಲ್ಲ ಎಂದರು. ನಾನು ಮೂರು ಸಾವಿರ ಮಠದ ಭಕ್ತ, ನಾನು ಮಠದ ಶಿಷ್ಯ, ನನ್ನ ಪ್ರಾಣ ಹೋದ್ರು ಚಿಂತೆ ಇಲ್ಲಾ, ಮಠದ ಆಸ್ತಿ ಉಳಿಯಬೇಕು. ಈ ಹಿಂದೆ 7 ಬಾರಿ ಕಾರು ಅಪಘಾತ ಮಾಡಿದ್ದಾರೆ, ನನ್ನ ಕಾರಿಗೆ ಬೆಂಕಿ ಹಚ್ಚಿದ್ದಾರೆ, ನಾನು ಯಾವುದಕ್ಕೂ ಜಗ್ಗುವುದಿಲ್ಲ. ನಾನು ಮೊನ್ನೆ 24 ರಂದು ಹುಬ್ಬಳ್ಳಿಯಿಂದ ಹೋಗುವಾಗ ನನ್ನ ಕಾರಿಗೆ ಅಡ್ಡಲಾಗಿ ಕಾರು ನಿಲ್ಲಿಸಲಾಗಿತ್ತು, ನನ್ನ ಕಾರು ನಿಲ್ಲಿಸಿ, ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಕುಂದಗೋಳ ರಸ್ತೆಯ ಮಾರ್ಗದಲ್ಲಿ ಹೋಗುವಾಗ ನನಗೆ ಅಟ್ಯಾಕ್ ಮಾಡಲು ಮುಂದಾಗಿದ್ದರು. ಈ ಹೋರಾಟವನ್ನ ಕೈಬಿಡಿ ಎಂದು ಒತ್ತಡ ಹಾಕಿದ್ದಾರೆ ಎಂದರು.ಇನ್ನೂ ಮಠದ ಆಸ್ತಿಯನ್ನು ಯಾರಿಗೂ ಪರಭಾರೆ ಮಾಡಬಾರದೆಂದು ಕೋರ್ಟ್ ಆದೇಶದವಿದ್ದರು 500 ಕೋಟಿ ಬೆಲೆ ಬಾಳುವ 25 ಎಕರೆ ಜಮೀನು ಕೊಡಲಾಗಿದೆ. ಮೂರು ಸಾವಿರ ಮಠ ಸ್ವತಹ ತಾವೇ ಖುದ್ದಾಗಿ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಿದ್ದರೆ ನಾನು ಪ್ರಶ್ನೆ ಮಾಡ್ತಾ ಇರಲಿಲ್ಲ. ಮೂರು ಸಾವಿರ ಮಠದ ವತಿಯಿಂದ ಉಚಿತ ಸೇವೆ ನಡೆಯಲಿ. ಆದರೆ ಕೆ ಎಲ್ ಇ ಸಂಸ್ಥೆಗೆ ನೀಡಿದ್ದು ಕಾನೂನು ಬಾಹಿರ ಎಂದರು.

ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version