Uncategorized

ರಸ್ತೆಯಲ್ಲಿ ದಲ್ಲಾಳಿಗಳಿಂದ ಅವರೆಕಾಯಿ ವಹಿವಾಟು ಜೋರು- ವಾಹನ ಸವಾರರಿಗೆ, ಸಾರ್ವಜನಿಕರರಿಗೆ ಶುರುವಾಯ್ತು ಕಿರಿಕಿರಿ..!

Published

on

ಶ್ರೀನಿವಾಸಪುರ ಪಟ್ಟಣದ ಮುಖ್ಯ ರಸ್ತೆಯಾದ ಎಂ.ಜಿ. ರಸ್ತೆಯಲ್ಲಿ ಅವರೆಕಾಯಿ ವಹಿವಾಟನ್ನು ದಲ್ಲಾಳಿಗಳು ನಡೆಸುತ್ತಿದ್ದು,ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಗುಡುಗಿದ್ದಾರೆ. ಕಳೆದ 1-2 ವರ್ಷಗಳ ಹಿಂದೆಯೂ ಸಹ ಇದೇ ರೀತಿ ಎಂ.ಜಿ.ರಸ್ತೆಯಲ್ಲಿ ಅವರೆ ವಹಿವಾಟು ನಡೆಸುತ್ತಿದ್ದರಿಂದ ಸಾರ್ವಜನಿಕರ ಓಡಾಡಕ್ಕೆ ತೊಂದರೆಯಾಗುತ್ತಿತ್ತು ಆ ಸಂದರ್ಭದಲ್ಲಿ ದಲ್ಲಾಳಿಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವಂತೆ ಸೂಚಿಸಿದ್ದೆ. ಆದರೆ ಶಾಸಕರಾದ ರಮೇಶ್ ಕುಮಾರ್ ರವರು ಮುಂದಿನ ವರ್ಷಕ್ಕೆ ಎಲ್ಲಾ ದಲ್ಲಾಳಿಗಳು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೇ ವಹಿವಾಟು ನಡೆಸಬೇಕು ಎಂದು ಅದೇಶಿಸಿದ್ದರು. ಆದ್ರೆ ಈ ವರ್ಷವೂ ಪಟ್ಟಣದ ಪ್ರಮುಖ ರಸ್ತೆಯಾದ ಎಂ.ಜಿ ರಸ್ತೆಯಲ್ಲಿ ವಹಿವಾಟು ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ತೊಂದರೆಯುಂಟಾಗುತ್ತಿದೆ. ಈ ಹಿನ್ನೆಲೆ ಸಂಬಂಧಪಟ್ಟಂತಹ ದಂಡಧಿಕಾರಿಗಳಿಗೆ, ಪುರಸಭಾ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ತಂದಿದ್ದರೂ ಯಾವೊಬ್ಬ ಅಧಿಕಾರಿಯು ಕ್ರಮಕೈಗೊಳ್ಳುತ್ತಿಲ್ಲ, ಸಾರ್ವಜನಿಕರ ಹಿತ ರಕ್ಷಣೆಯನ್ನು ಕಾಪಾಡಬೇಕಾದ ಅಧಿಕಾರಿಗಳು ಈ ರೀತಿ ಮೌನವಾಗಿರುವುದನ್ನು ಬಿಟ್ಟು ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬೇಕು ಅಧಿಕಾರಿಗಳ ಈ ವರ್ತನೆಗೆ ಗುಡುಗಿದರು.

ವರದಿ- ರಾಮಪ್ಪ ಎಕ್ಸ್ ಪ್ರೆಸ್ ಟಿವಿ ಶ್ರೀನಿವಾಸಪುರ

Click to comment

Trending

Exit mobile version