Uncategorized

ಭೀಮಾತೀರದಲ್ಲಿ ಎರಡು ಲಕ್ಷಕ್ಕೂ ಅಧಿಕ ಮತದಾರರಿಂದ ಮತದಾನ..!

Published

on

ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ 2 ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಶೇಕಡಾ 72.91 ರಷ್ಟು ಮತದಾನ ನಡಿದಿದೆ. ಒಟ್ಟು ತಾಲೂಕಿನ 38 ಗ್ರಾಮ ಪಂಚಾಯತಗಳ ಪೈಕಿ ಪುರಷ 1 ಲಕ್ಷ 13 ಸಾವಿರ 224, ಮಹಿಳಾ 1ಲಕ್ಷದ 5 ಸಾವಿರ 412, ಇತರೆ 17, ಒಟ್ಟಿಗೆ 2 ಲಕ್ಷ 18 ಸಾವಿರ 653 ಮತದಾರರು ಮತದಾನ ಮಾಡಿದರು. ಭೀಮಾತೀರದಲ್ಲಿ ಬಹಳ ಕುತೂಹಲ ಮೂಡಿಸಿರುವ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತದಾನ ಮಾಡಿ, ಮತದಾನದ ರಹಸ್ಯ ಬಚ್ಚಿಟ್ಟಿದ್ದಾರೆ. ಬೀಮಾ ತೀರದ ಗ್ರಾಮಸ್ಥರು. ಮತದಾನ ತಾಲ್ಲೂಕಿನಾದ್ಯಂತ ಬಹುತೇಕ ಗ್ರಾಮದಲ್ಲಿ ತಾಲೂಕು ಆಡಳಿತದ ಪೂರ್ವ ನಿಯೋಜಿತ ಸಿದ್ದತೆ ಹಾಗೂ ಪೋಲಿಸ್ ಇಲಾಖೆಯ ಮುನ್ನೆಚ್ಚರಿಕೆ, ಮುಂಜಾಗೃತೆ ಹಾಗೂ ಅಗತ್ಯ ಸಿದ್ದತೆಯ ಬಂದೊಬಸ್ತ್ ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಮತದಾನ ನಡೆಸಲಾಯಿತು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Click to comment

Trending

Exit mobile version