ಇಂಡಿ

ಇಂಡಿ ಪಟ್ಟಣದ ಆದರ್ಶ ಶಾಲೆಯಲ್ಲಿ ಮತ ಎಣಿಕೆ-ತಹಶಿಲ್ದಾರ ಸಿ.ಎಸ್.ಕುಲಕರ್ಣಿ..!

Published

on

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಿನಿ ವಿಧಾನ ಸೌಧದ ತಹಶಿಲ್ದಾರ ಕಾರ್ಯಾಲಯದಲ್ಲಿ ಮಾದ್ಯಮ ಗೋಷ್ಟಿಯನ್ನು ಉದ್ದೇಶಿಸಿ ತಾಲೂಕು ದಂಢಾಧಿಕಾರಿ ಸಿ.ಎಸ್ ಕುಲಕರ್ಣಿ ಮಾತಾನಾಡಿದರು. ತಾಲ್ಲೂಕಿನ 38 ಗ್ರಾಮ ಪಂಚಾಯತ್ ಗಳಲ್ಲಿ ಸೂಸತ್ರವಾಗಿ ಮತದಾನವಾಗಿದೆ. ಅದರಂತೆ ಡಿಸೆಂಬರ್ 30 ರಂದು ಬೆಳಿಗ್ಗೆ 7 ಘಂಟೆಯಿಂದಲೇ ಮತ ಎಣಿಕೆ ಇಂಡಿ ಪಟ್ಟಣದ ಆದರ್ಶ ಮಹಾ ವಿದ್ಯಾಲಯದಲ್ಲಿ ನಡೆಯಿಲಿದೆ. ಮತ ಎಣಿಕೆ ಎರಡು ಸುತ್ತಿನಲ್ಲಿ ನಡೆಯುತ್ತಿದೆ. ಮೊದಲನೆಯ ಸುತ್ತಿನಲ್ಲಿ ಸಾಲೋಟಗಿ, ತಾಂಬಾ, ರೂಗಿ, ಅಥರ್ಗಾ, ತಡವಲಗಾ, ನಿಂಬಾಳ ಮಸಳಿ ಬಿಕೆ ಹಾಗೂ ಇನ್ನಿತರ ಗ್ರಾಮಗಳ ಎಣಿಕೆ ನಡೆಯುತ್ತಿದೆ. ಮತ ಎಣಿಕೆಗೆ ನಿಯೋಜಿತ ಗೊಂಡಿರುವ ಸಿಬ್ಬಂದಿಗಳು ಮತ ಎಣಿಕೆ ಸ್ಥಳದಲ್ಲಿ 6 ಘಂಟೆಗೆ ಹಾಜರರಿಬೇಕು. ಒಂದನೇ ಸುತ್ತಿಗೆ ಆಯ್ಕೆಯಾದ ಪಂಚಾಯತಿಯ ಆಯಾ ಅಭ್ಯರ್ಥಿಗಳು ಅಥವಾ ಎಜೆಂಟ್ ಒಬ್ಬರು ಮಾತ್ರ ಮುಂಜಾನೆ 6 ಘಂಟೆಗೆ ಭದ್ರತಾ ಕೊಠಡಿಯಲ್ಲಿ ಹಾಜರಿರಬೇಕು ಎಂದು ತಿಳಿಸಿದರು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Click to comment

Trending

Exit mobile version