ಸಿನಿಮಾ

ಗಿರ್ ನ್ಯಾಶನಲ್ ಪಾರ್ಕ್ ನಲ್ಲಿ ಎರಡನೇ ಪತ್ನಿ ಜೊತೆ ಆ್ಯನಿವರ್ಸೆರಿ ಆಚರಿಸಿಕೊಂಡ ಅಮೀರ್ ಖಾನ್..!

Published

on

ಬಾಲಿವುಡ್ ನಟ ಅಮೀರ್ ಖಾನ್ ಅವರು ಗಿರ್ ನ್ಯಾಶನಲ್ ಪಾರ್ಕ್ನಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದು, ಕುಟುಂಬದ ಜೊತೆಗೆ ಸಫಾರಿ ಹೋಗಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಆಮೀರ್ ಬಿಡುವು ಮಾಡಿಕೊಂಡು ಹೀಗೆ ಸಫಾರಿ ಹೋಗಿದ್ದಕ್ಕೆ ವಿಶೇಷ ಕಾರಣವೂ ಇದೆ. ಅದೇನೆಂದರೆ ಅಮೀರ್ ಖಾನ್ ತನ್ನ ಎರಡನೇ ಪತ್ನಿ ಕಿರಣ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 15 ವರ್ಷಗಳಾಗಿದೆ. ವಿವಾಹ ವಾರ್ಷಿಕೊತ್ಸವದ ಸಂಭ್ರಮದಲ್ಲಿದ್ದ ಈ ಜೋಡಿ ಕೆಲಸದ ಮಧ್ಯೆ ಕೊಂಚ ಬಿಡುವು ಮಾಡಿಕೊಂಡು ಪತ್ನಿ ಕಿರಣ್ ರಾವ್, ಇರಾಖಾನ್, ಆಜಾದ್ ಖಾನ್, ಇಮ್ರಾನ್ ಖಾನ್, ಇಮಾರಾ ಖಾನ್ ಜೊತೆ ಆಮೀರ್ ಖಾನ್ ಗಿರ್ ಪಾರ್ಕ್ ಪ್ರವೇಶ ಮಾಡಿದ್ದಾರೆ. ಇನ್ನೂ ಭಾನುವಾರ ಆಮೀರ್ ಖಾನ್ ಅವರು ಪಾರ್ಕ್ಗೆ ಬರುತ್ತಿದ್ದಂತೆ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಆಗ ಜಿಪ್ಸಿಯಲ್ಲಿ ಕೂತು ಅಭಿಮಾನಿಗಳತ್ತ ಆಮೀರ್ ಕೈಬೀಸಿದ್ದಾರೆ.ಇನ್ನೂ ಅಮೀರ್ ಖಾನ್ ಗೆ ಕಿರಣ್ ರಾವ್ ಅವರು ಎರಡನೇ ಪತ್ನಿ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆಮೀರ್ ಖಾನ್, ‘ನಾನು ಲಗಾನ್ ಸಿನಿಮಾ ಮಾಡುವಾಗ ಕಿರಣ್ ಭೇಟಿ ಮಾಡಿದೆ. ಅವಳೂ ಕೂಡ ಸಹಾಯಕ ನಿರ್ದೇಶಕಿಯಾಗಿದ್ದಳು. ಆಗ ನಮ್ಮಿಬ್ಬರ ಮಧ್ಯೆ ಯಾವ ಸಂಬಂಧವೂ ಇರಲಿಲ್ಲ. ನಾವು ಅಷ್ಟಾಗಿ ಸ್ನೇಹಿತರೂ ಕೂಡ ಆಗಿರಲಿಲ್ಲ. ಅವಳು ಆಗ ಆ ಸೆಟ್ನಲ್ಲಿದ್ದ ಓರ್ವ ವ್ಯಕ್ತಿಯಾಗಿದ್ದಳು. ನನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ ನಂತರ ನಾನು ಕಿರಣ್ ಭೇಟಿ ಮಾಡಿದೆ. ಆಮೇಲೆ ಅವಳ ಜೊತೆ ಅರ್ಧ ಗಂಟೆ ಫೋನ್ನಲ್ಲಿ ಮಾತನಾಡಿದ ನಂತರ ತುಂಬ ಖುಷಿಯಾಯ್ತು’ ಎಂದಿದ್ದರೂ. ಇನ್ನೂ ನನ್ನ ಜೀವನದಲ್ಲಿ ಕಿರಣ್ ಇರೋದಕ್ಕೆ ತುಂಬ ಪುಣ್ಯ ಮಾಡಿದ್ದೇನೆ. ನನಗೆ ಅವಳ ಜೊತೆ ಸಮಯ ಕಳೆಯೋದು ತುಂಬ ಇಷ್ಟ. ನನಗೆ ಸ್ಟ್ರಾಂಗ್ ಮಹಿಳೆಯರು ಅಂದರೆ ತುಂಬ ಇಷ್ಟ. ಅದರಲ್ಲೂ ನನ್ನ ಮೊದಲ ಪತ್ನಿ ರೀನಾ, ಎರಡನೇ ಪತ್ನಿ ಕಿರಣ್ ಇಷ್ಟಪಡುತ್ತೇನೆ’ ಎಂದು ಆಮೀರ್ ಹೇಳಿದ್ದಾರೆ. 16 ವರ್ಷ ರೀನಾ ದತ್ತ ಹಾಗೂ ಆಮೀರ್ ಸಂಸಾರ ನಡೆಸಿದ್ದರು. 2002ರಲ್ಲಿ ಇವರಿಬ್ಬರು ದೂರವಾದರು. ವಿಚ್ಛೇದನದ ನಂತರ ಕೂಡ ಆಮೀರ್ ಹಾಗೂ ರೀನಾ ಉತ್ತಮ ಸ್ನೇಹಿತರು. ಇವರಿಬ್ಬರಿಗೆ ಜುನಾಯದ್ ಹಾಗೂ ಇರಾ ಎಂಬ ಮಕ್ಕಳಿದ್ದಾರೆ. ಇದೀಗ ಎರಡನೇ ಪತ್ನಿ ಕಿರಣ್ ಜೊತೆ ಅಮೀರ್ ಸಪ್ತಪದಿ ತುಳಿದು 15 ವರ್ಷಗಳು ಕಳೆದಿದ್ದು, ಮಕ್ಕಳ ಜೊತೆ ದಂಪತಿಗಳು ವಿವಾಹ ವಾರ್ಷಿಕೊತ್ಸವವನ್ನು ಆಚರಿಸಿಕೊಂಡಿದ್ದಾರೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version