ಚಿಕ್ಕಬಳ್ಳಾಪುರ

ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ವಿದ್ಯುತ್ ಕಂಬ..!

Published

on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ನಿಂದ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಅನಾಹುತ ತಪ್ಪಿದೆ. ನಗರದ ಹೃದಯ ಭಾಗದಲ್ಲಿರುವ ಹಳೇ ತಾಲೂಕು ಕಚೇರಿ ಮುಂಭಾಗದಲ್ಲಿ ವಿದ್ಯುತ್ ಕಂಬದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಕಂಡ ನಗರ ಠಾಣೆಯ ಪೊಲೀಸರು, ಕೂಡಲೇ ಅಗ್ನಿಶಾಮಕ ದಳದವರನ್ನು ಕರೆಸಿ ವಿದ್ಯುತ್ ಕಡಿತಗೊಳಿಸಿ ನಂತರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂದಿನಂತೆ ಪ್ರತಿನಿತ್ಯ ನಗರ ನಿವಾಸಿಗಳು, ಗ್ರಾಹಕರು ಓಡಾಟ ನಡೆಸುತ್ತಿದ್ದು,ಭಯಭೀತರಾಗಿ ನಡು ರಸ್ತೆಗೆ ಇಳಿದು ದಿಕ್ಕು ತೋಚದಂತಾಗಿದ್ದಾರೆ. ಹೊತ್ತಿ ಉರಿದ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ವಿದ್ಯುತ್ ಕಂಬದ ಕೆಳಗೆ ಬೀದಿಬದಿ ವ್ಯಾಪರಸ್ಥರು ಹಾಗೂ ಗಾಂಧಿ ವೃತ್ತದ ಬಳಿಯ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ರಸ್ತೆಗೆ ಓಡಿ ಬಂದಿದ್ದಾರೆ. ಶಾರ್ಟ್ ಸರ್ಕ್ಯೂಟ್ ಆದ ವಿದ್ಯುತ್ ಕಂಬದ ಕೆಳಗೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದು, ಕೆಲಕಾಲ ಭಯದಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸುಮಾರು 1 ಗಂಟೆಯಿಂದ ನಗರದ ಹಲವು ಕಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದು, ನಗರ ನಿವಾಸಿಗಳಿಗೆ ದಿಕ್ಕು ತೋಚದಂತಾಗಿ ಬೆಸ್ಕಾಂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version