ತಿಪಟೂರು

ಕಲ್ಪತರು ವಿದ್ಯಾಸಂಸ್ಥೆಯ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಸಂಗತಿ- ಪಿ.ಕೆ.ತಿಪ್ಪೇರುದ್ರಪ್ಪ..!

Published

on

ತಿಪಟೂರು: ಕಲ್ಪತರು ವಿದ್ಯಾಸಂಸ್ಥೆಯ ವಿರುದ್ಧ ಆರೋಪಗಳನ್ನು ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಸಹಕಾರ ಇಲಾಖೆಯು ನೀಡಿರುವಂತಹ ನೋಟಿಸ್ ಉತ್ತರವನ್ನು ನೀಡಲಾಗಿದೆ ಎಂದು ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ತಿಳಿಸಿದರು. ನಗರದ ಕಲ್ಪತರು ತಾಂತ್ರಿಕ ವಿದ್ಯಾಲಯದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಪತರು ವಿದ್ಯಾಸಂಸ್ಥೆಯೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಕೆಲಸದ್ಯರುಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.ಹಿಂದೆ ಅವರು ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ಇಲ್ಲದ ಸಮಸ್ಯೆಗಳನ್ನು ಸೃಷ್ಠಿಸಲು ಪ್ರಯತ್ನಿಸುತ್ತಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಸಹಕಾರ ಸಂಘದ ಚುನಾವಣೆ ತಡವಾಗಿದೆ. ಅಲ್ಲದೇ ಅವರ ನಿರ್ದೇಶನದಂತೆಯೇ ಸರ್ವಸದಸ್ಯರ ಸಭೆ, ಚುನಾವಣೆಯನ್ನು ನಿಗಧಿಪಡಿಸಲಾಗಿದೆ. ಅಲ್ಲದೇ ಸಹಕಾರ ಸಂಘದ ಜಂಟಿ ನಿರ್ದೇಶಕರು ಅಪರಾದ ಸಾಬೀತಾಗಿರುವ ಹಿನ್ನೆಲೆಯೆಂದು ನೋಟಿಸ್ನಲ್ಲಿ ಉಲ್ಲೇಖಿಸಿದ್ದು ಇಲ್ಲಿಯವರೆವಿಗೂ ಯಾವುದೇ ರೀತಿಯ ಪರಿಶೀಲನೆ ನಡೆಯದೆ ಈ ರೀತಿ ತಿಳಿಸಿದ್ದಾರೆ. ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಇಲ್ಲಿಯವರೆವಿಗೂ ಯಾವುದೇ ರೀತಿಯ ಅವ್ಯವಹಾರಗಳು ನಡೆದಿಲ್ಲ ಎಂದು ಸ್ಫಷ್ಟೀಕರಣ ನೀಡಿದರು.ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ಮಾತನಾಡಿ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಅಧಿಕಾರಸಿಗದ ಹಿನ್ನೆಲೆಯಲ್ಲಿ ಕೆಲಸದಸ್ಯರು ಈ ರೀತಿಯ ಕ್ಷುಲ್ಲಕ ಅಪಾದನೆ ಮಾಡಿ ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ಮಾಡಲು ಮುಂದಾಗಿದ್ದಾರೆ. ಸಂಸ್ಥೆಯಲ್ಲಿ ಆಗಿರುವಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಖರ್ಚು, ವೆಚ್ಚದ ಬಗ್ಗೆ ಸಂಪೂರ್ಣ ದಾಖಲೆಗಳಿದ್ದು ಸರ್ವ ಸದಸ್ಯರ ಸಭೆಯಲ್ಲಿ ಎಲ್ಲರಿಗೂ ಪ್ರತಿ ಬಾರಿಯೂ ತಿಳಿಸಲಾಗುತ್ತದೆ. ಪದವಿ ಕಾಲೇಜಿಗೆ ಬರುತ್ತಿದ್ದ ಯುಜಿಸಿ ಅನುದಾನ ತಡೆಹಿಡಿಯಲು ಹಿಂದೆ ಖಜಾಂಚಿಯಾಗಿದ್ದ ಬಿ.ಆರ್.ವಿಶ್ವನಾಥ್ ರಾಜ್ಯಪಾಲರಿಗೆ ಸಂಸ್ಥೆಯ ವಿರುದ್ಧ ಸುಳ್ಳು ಆರೋಪ ಮಾಡಿ ಪತ್ರ ಬರೆದಿದ್ದರು. ಅವರು ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಸೆಂಟ್ರಲ್ ಶಾಲೆಯ ಸಿಬ್ಬಂದಿಗಳ ಪಿ.ಎಫ್ ಹಣವನ್ನು ವರ್ಷಾನುಗಟ್ಟಲೆ ಪಾವತಿಸದೇ 60 ಲಕ್ಷಕ್ಕೂ ಅಧಿಕ ದಂಡವನ್ನು ಸಂಸ್ಥೆಯಿಂದ ಕಟ್ಟಲಾಗಿದೆ ಎಂದು ಆರೋಪಿಸಿದರು. ಅಲ್ಲದೇ ಸಂಸ್ಥೆಯ ಪ್ರಚಾರಕ್ಕಾಗಿ ವಿಡಿಯೋ ಮಾಡಿಸಿರುವುದಾಗಿ 1 ಲಕ್ಷ 95 ಸಾವಿರ ಬಳಸಿಕೊಂಡಿದ್ದಾರೆ.ಆದರೆ ಯಾವುದೇ ವಿಡಿಯೋಮಾಡಿಸಿರುವ ಬಗ್ಗೆ ದಾಖಲೆಗಳಿಲ್ಲ.ಇಂದು (ಡಿ.29) ಸರ್ವ ಸದಸ್ಯರ ಸಭೆಯಲ್ಲಿ ಸಂಸ್ಥೆಯ ವ್ಯವಹಾರದ ಪೂರ್ತಿ ದಾಖಲೆ ನೀಡಲಿದ್ದು ಸಭೆಗೆ ಹಾಜರಾಗಿ ಪರಿಶೀಲನೆ ಮಾಡಲಿ ಎಂದರು.

ವರದಿ-ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version