Uncategorized

ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ಆರಂಭ-ಹಳ್ಳಿ ಫೈಟ್ ನಲ್ಲಿ ಗೆಲ್ಲುವವರಾರು?

Published

on

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಆದರ್ಶ ಮಹಾವಿದ್ಯಾಲಯದಲ್ಲಿ ತಾಲೂಕಿನ 38 ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಪ್ರಕ್ರಿಯೆ, ಇಂದು ಬೆಳಿಗ್ಗೆ 8 ಘಂಟೆಗೆ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ಸ್ಟ್ರಾಂಗ್ ಒಪನ್ ಮಾಡಲಾಯಿತು. ಇನ್ನೂ ಅಭ್ಯರ್ಥಿಗಳು ಮತ್ತು ಏಜೆಂಟರುಗಳು ಮತ ಎಣಿಕೆ ಕೇಂದ್ರದತ್ತ ಹೆಜ್ಜೆ ಹಾಕುತ್ತಿದ್ದು, ಮೊದಲನೇಯ ಸುತ್ತಿನಲ್ಲಿ ಸಾಲೋಟಗಿ,ರೂಗಿ , ತಾಂಬಾ, ಕೊಳುರಗಿ, ಹಿರೇಮಸಳಿ, ತಡವಲಗಾ, ಅಥರ್ಗಾ, ಊರುಗಳ ಮತ ಎಣಿಕೆ ಪ್ರಾರಂಭ ಮಾಡಲಾಗಿದೆ. ಇನ್ನೂ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಮತ ಎಣಿಕೆ ಪ್ರಕ್ರಿಯೆಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ ಮತ್ತು ಸ್ಯಾನಿಟೈಸರ್ ಬಳಸಬೇಕು. ಇನ್ನೂ ಕೇಂದ್ರದ ಒಳಗೆ ಸಾಮಾಜಿಕ ಅಂತರ ಕಾಪಾಡಬೇಕು ಜೊತೆಗೆ ಕೇಂದ್ರದ ಒಳ ಹೋಗುವ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದ್ದು, ಹಳ್ಳಿ ಫೈಟ್ ನಲ್ಲಿ ಯಾರು ಗೆಲ್ಲುತ್ತಾರೆಂದು ಗ್ರಾಮಸ್ಥರು ಕುತೂಬಹಲದಿಂದ ಕಾಯುತ್ತಲಿದ್ದಾರೆ.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Click to comment

Trending

Exit mobile version