ಸಿನಿಮಾ

ಮಿಲನ’ ಪಾರ್ವತಿ ನಟನೆಯ ಸಿನಿಮಾ ಮೇಲೆ ದೇಶದ್ರೋಹ ಆರೋಪ..!

Published

on

ಪುನೀತ್ ರಾಜ್ಕುಮಾರ್ ಜೊತೆ ‘ಮಿಲನ’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ಪರಿಚಿತರಾದ ನಟಿ ಪಾರ್ವತಿ ಮೆನನ್ ಅಭಿನಯಿಸಿರುವ ಹೊಸದೊಂದು ಸಿನಿಮಾ ತೊಂದರೆಗೆ ಸಿಲುಕಿದೆ.’ವರ್ತಮಾನಂ’ ಶೀರ್ಷಿಕೆಯ ಮಲಯಾಳಂ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ, ರಾಷ್ಟ್ರವಿರೋಧಿ ಸಿನಿಮಾ ಎಂಬ ಆರೋಪ ಕೂಡ ಎದುರಾಗಿದೆ. ಸಿದ್ಧಾರ್ಥ್ ಶಿವ ನಿರ್ದೇಶನದ ‘ವರ್ತಮಾನಂ’ ಸಿನಿಮಾದಲ್ಲಿ ಪಾರ್ವತಿ ಮೆನನ್ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಜೆಎನ್ ಯು ಕ್ಯಾಂಪಸ್ನಲ್ಲಿ ನಡೆದ ಪ್ರತಿಭಟನೆಯ ಕುರಿತ ದೃಶ್ಯಗಳು ಈ ಚಿತ್ರದಲ್ಲಿ ಇದೆ ಎನ್ನಲಾಗಿದೆ. ಸಂಶೋಧಕಿಯ ಪಾತ್ರದಲ್ಲಿ ಪಾರ್ವತಿ ಕಾಣಿಸಿಕೊಂಡಿದ್ದು, ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಬಗ್ಗೆ ತಿಳಿದುಕೊಳ್ಳಲು ಜೆಎನ್ಯು ಕ್ಯಾಂಪಸ್ಗೆ ಅವರು ತೆರಳುವ ದೃಶ್ಯಗಳು ಇವೆ ಎಂದು ಹೇಳಲಾಗಿದೆ. ಈ ಸಿನಿಮಾ ಪ್ರದರ್ಶನ ಮಾಡಲು ಕೇರಳದ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ಕಿಲ್ಲ. ಯಾವುದೇ ಕಾರಣಗಳನ್ನೂ ನೀಡದೇ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳಿಸಲಾಗಿದೆ. ‘ರಾಜಕೀಯದ ನಿಲುವುಗಳು ಏನೇ ಇದ್ದರೂ ಜೆಎನ್ಯು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಅನ್ಯೋನ್ಯವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬ ಸಂದೇಶವನ್ನು ನಾವು ಈ ಚಿತ್ರದಲ್ಲಿ ನೀಡಿದ್ದೇವೆ’ಎಂದಿದ್ದಾರೆ. ಇನ್ನೂ ಈ ಚಿತ್ರದ ಸ್ಕ್ರಿಪ್ಟ್ ರೈಟರ್ ಆರ್ಯದನ್ ಶೌಕತ್ ರಾಜಕಾರಣಿ ಆಗಿದ್ದು, ಅವರು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version