ಚಿಕ್ಕಬಳ್ಳಾಪುರ

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಯುವ ಸಮುದಾಯ..!

Published

on

ಚಿಕ್ಕಬಳ್ಳಾಪುರ: ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಯುವ ಸಮುದಾಯದ ಆಭ್ಯರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ಗೆಲವು ದಾಖಲಿಸಿ ವಿಜಯ ಪಾತಕೆ ಹಾರಿಸಿದ್ದಾರೆ. ಅದರಂತೆ ಬೀಚಗಾನಹಳ್ಳಿ ಗ್ರಾಮ ಪಂಚಾಯತಿಯ ಬಾಲೇನಹಳ್ಳಿ ಕ್ಷೇತ್ರದಿಂದ ಯುವಕ ರಮೇಶ್ 314 ಮತಗಳನ್ನು ಪಡೆದು ಆಧಿಕ ಮತಗಳಿಂದ ಗೆಲುವಿನ ನಗೆ ಬಿರಿದ್ದಾರೆ.ಇನ್ನುಳಿದಂತೆ ಅತ್ಯಂತ ಜಿದ್ದಾ-ಜಿದ್ದಿ ಕ್ಷೇತ್ರವಾಗಿದ್ದ ಕೊಂಡರೆಡ್ಡಿಹಳ್ಳಿ ಕ್ಷೇತ್ರದಿಂದ ಯುವಕ ನಾಗಾರಾಜ್ 200 ಮತಗಳನ್ನು ಪಡೆದು ಜಯಗಳಿಸಿದ್ದು, ಎಲ್ಲೋಡು ಕ್ಷೇತ್ರದಿಂದ ಹರೀಶ್ 697 ಮತಗಳಿಂದ ಅಖಂಡ ಗೆಲುವು ಪಡೆದಿದ್ದು ಇನ್ನೂ ದೂಮ ಕುಂಟಹಳ್ಳಿ ಕ್ಷೇತ್ರದಿಂದ ಅನುಸೂಯಮ್ಮ 312 ಹಾಗೂ ರಮೇಶ್ ಬಾಬು 225 ಹಾಗೂ ಕೋರೆನಹಳ್ಳಿ ಕ್ಷೇತ್ರದಿಂದ ವೈ.ಎನ್ ಪ್ರಕಾಶ್ 382 ಮತಗಳಿಂದ ಮೊದಲ ಬಾರಿಗೆ ಗೆಲುವು ಗಳಿಸಿದ್ದಾರೆ.

ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version