Uncategorized

ಸ್ಥಳೀಯ ಮಿನಿ ಸಮರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ್ ಗೆ ಮುಖಭಂಗ..!

Published

on

ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮ ಪಂಚಾಯತ್ ಚುನಾವಣೆ ಅತೀ ಸೂಕ್ಷ್ಮತೆ ಹೊಂದಿದ್ದು ಜಿಲ್ಲೆಯಲ್ಲಿ ಭಾರಿ ಕೂತಹಲ ಮೂಡಿಸಿತ್ತು. ಕಾಂಗ್ರೆಸ್ ಪಕ್ಷದ ಇಂಡಿ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯ ಶಿವಯೋಗೆಪ್ಪ ನೆದಲಗಿ ಮಧ್ಯ ಭಾರಿ ರಾಜಕೀಯ ಜಿದ್ದಾಜಿದ್ದಿನಿ ಕಣವಾಗಿ ಮಾರ್ಪಟಿತ್ತು. 2020-21 ನೇ ಸಾಲಿನ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶದ ಹಿನ್ನೆಲೆ ಸಾಲೋಟಗಿ ಗ್ರಾಮದ ಸ್ವ-ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಶಿವಯೊಗೆಪ್ಪ ನೆದಲಗಿ ಮಾತಾನಾಡಿ ಸಾಲೋಟಗಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಶಾಸಕರು ಪ್ರತಿಷ್ಠಿತ ಮತ್ತು ಹೆಮ್ಮೆಯ ಚುನಾವಣೆಯಾಗಿ ತೆಗೆದು ಕೊಂಡಿದ್ದರು. ಆದರೆ ಸಾಲೋಟಗಿ ಗ್ರಾಮಸ್ಥರು 34 ಅಭ್ಯರ್ಥಿಗಳ ಪೈಕಿ 25 ಅಭ್ಯರ್ಥಿಗಳನ್ನ ನಮ್ಮ ಪೆನಲ್ ಆಯ್ಕೆ ಮಾಡಿಕೊಟ್ಟು ಶಾಸಕರಿಗೆ ತಕ್ಕ ಉತ್ತರ ಕೊಟ್ಟು ಮುಖಭಂಗ ಮಾಡಿದ್ದಾರೆ.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Click to comment

Trending

Exit mobile version