ಸಿನಿಮಾ

ಬಿಗ್ ಬಾಸ್ ಮನೆಯಲ್ಲಿ ಬಾಲ್ಯದ ಕಹಿ ಘಟನೆ ನೆನಪಿಸಿಕೊಂಡ ರಾಖಿಸಾವಂತ್..!

Published

on

ಬಿಗ್ ಬಾಸ್ ಹಿಂದಿ ಸೀಸನ್ 14ರಲ್ಲಿ ಭಾಗವಹಿಸಿರುವ ನಟಿ ರಾಖಿ ಸಾವಂತ್ ಕೆಲವು ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಬಾಲ್ಯದಲ್ಲಿನ ಹಲವು ಕೆಟ್ಟ ಸಂಗತಿಗಳ ಬಗ್ಗೆ ಅವರು ಬಿಗ್ ಬಾಸ್ ಮನೆಯಲ್ಲಿ ಬಾಯಿ ಬಿಟ್ಟಿದ್ದಾರೆ. ತುಂಬ ಬೋಲ್ಡ್ ಆದಂತಹ ಹೇಳಿಕೆಗಳನ್ನು ನೀಡುವ ಮೂಲಕ ಬಾಲಿವುಡ್ನಲ್ಲಿ ಗುರುತಿಸಿಕೊಂಡವರು ನಟಿ ರಾಖಿಸಾವಂತ್. ಆದರೆ ಅವರು ಬಾಲ್ಯದಲ್ಲಿ ತೀರಾ ಕಟ್ಟುನಿಟ್ಟಿನ ವಾತಾವರಣದಲ್ಲಿ ಬೆಳೆದಿದ್ದರಂತೆ. ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಈ ನಟಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ರಾಖಿ ಸಾವಂತ್ ಚಿಕ್ಕ ಹುಡುಗಿ ಆಗಿದ್ದಾಗ ಅವರ ಮಾವ ತೀವ್ರವಾಗಿ ಥಳಿಸಿದ್ದರಂತೆ ಅದರಿಂದ ಹೊಲಿಗೆ ಹಾಕಿಸಿಕೊಳ್ಳುವಷ್ಟು ದೊಡ್ಡದಾಗಿ ಗಾಯ ಆಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಬಾಲ್ಯದಲ್ಲಿ ಮನೆಯ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ‘ನಾನು ಬಾಲ್ಕನಿಯಲ್ಲಿ ನಿಲ್ಲುವಂತಿರಲಿಲ್ಲ. ಐಬ್ರೋ, ವ್ಯಾಕ್ಸಿಂಗ್ ಕೂಡ ಮಾಡಿಕೊಳ್ಳಲು ಬಿಡುತ್ತಿರಲಿಲ್ಲ. ಅವರು ಎಂಥ ಗಂಡಸರೋ ನನಗೆ ತಿಳಿದಿಲ್ಲ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version