Uncategorized

ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಪುಲೆರವರ 190ನೇ ಜಯಂತೋತ್ಸವ..!

Published

on

ಅಳಂದ: ಸಾಮಾಜಿಕ ಸಮಾನತೆ ಮೂಲಕ ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಫುಲೆಯವರ 190 ಜಯಂತಿಯನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಮಾಳಿ ಸಮುದಾಯದಿಂದ ಆಚರಿಸಲಾಯಿತು. ಇನ್ನು ಈ ಸಂದರ್ಭದಲ್ಲಿ ಯುವ ಮುಖಂಡ ಮಲ್ಲಿನಾಥ ಬಂಬಾಸೆ ಮಾತನಾಡಿ ಹಿಂದಿನ ಕಾಲದಲ್ಲಿ ಅತ್ಯಂತ ಶೋಷಣೆಗೆ ಒಳಗಾದವರಲ್ಲಿ ಎರಡು ವರ್ಗಗಳಾಗಿದ್ದು, ಒಂದು ಕೆಳವರ್ಗ ಮತ್ತು ಮಹಿಳೆಯರನ್ನು ತಿರಾ ಕನಿಷ್ಠವಾಗಿ ನೋಡಲಾಗುತ್ತಿದ್ದ ಸಮಯದಲ್ಲಿ ಶಿಕ್ಷಣ ಅನ್ನುವುದು ದೂರದ ಮಾತಾಗಿತ್ತು, ಇಂತಹ ಸಂದರ್ಭದಲ್ಲಿ ಸಮಾಜದ ಈ ವ್ಯವಸ್ಥೆಯನ್ನು ಶಿಕ್ಷಣದಿಂದ ಮಾತ್ರ ಬದಲಾವಣೆ ಮಾಡಲು ಸಾದ್ಯ ಎಂದು ಶಿಕ್ಷಣ ಕಲಿತು ಅನೇಕ ಬಡ ಹಿಂದುಳಿದ ವರ್ಗಕ್ಕೆ ಆಶಾಕಿರಣವಾದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಫುಲೆ ನಮಗೆಲ್ಲ ಮಾದರಿಯಾಗಿದ್ದಾರೆ ಎಂದರು. ಇನ್ನೂ ಈ ಸಮಯದಲ್ಲಿ ತಾ.ಪಂ ಸದಸ್ಯ ಸಾತಪ್ಪ, ಕೊಳಶೆಟ್ಟಿ ಮುಖಂಡ ಶಿವಪ್ಪ ಕೊಳಶೆಟ್ಟಿ, ಶಿವಲಿಂಗಪ್ಪಾ ಮೈಂದರ್ಗಿ, ಸೇರಿದಂತೆ ಮತ್ತಿತರು ಉಪಸ್ಥೀತರಿದ್ದರು.

ವರದಿ-ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ

Click to comment

Trending

Exit mobile version