Uncategorized

ಆರು ವರ್ಷಗಳ ಸಾರ್ಥಕ ಸೇವೆಯನ್ನು ಸ್ಮರಿಸಿದ ಜಿಲ್ಲಾ ನಿರ್ದೇಶಕರು..!

Published

on

ಬಾಗೆಪಲ್ಲಿ: ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಸ್ಥಳ ಸಂಘ ಮಾಡದ ಸೇವೆ ಇಲ್ಲ ಎಂದರೆ ತಪ್ಪಾಗಲಾರದು. ಬಾಗೇಪಲ್ಲಿ ನಗರದಿಂದ ಗ್ರಾಮಗಳವರೆಗೂ ತನ್ನ ವಿಸ್ತಾರವನ್ನು ಪಡೆದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನಲ್ಲಿ ಆರು ವರ್ಷಗಳ ಹಿಂದೆ ಪ್ರಾರಂಭಗೊಂಡು 2258 ಸಂಘಗಳ ಮೂಲಕ 18971 ಸದಸ್ಯರನ್ನು ಒಳಗೊಂಡಿದೆ. ಮೊದಲೇ ಈ ಭಾಗದಲ್ಲಿ ಸರಿಯಾದ ಸಮಯಕ್ಕೆ ಮಳೆ ಬಾರದೇ ಬೆಲೆ ಇಲ್ಲದೆ ಬಯಲುಸೀಮೆ ಪ್ರದೇಶವಾದ ಈ ತಾಲೂಕಿಗೆ ಧರ್ಮಸ್ಥಳ ಸಂಘ ವರದಾನವಾಗಿ , ಕೆರೆಗಳ ಪುನಶ್ಚೇತನ, ಸಬ್ಸಿಡಿ ಅನುದಾನ, ಶಿಷ್ಯ ವೇತನ ಕಾರ್ಯಕ್ರಮ, ಕೃಷಿ ಕಾರ್ಯಕ್ರಮ, ಕೃಷಿ ತರಬೇತಿ ಇಂತಹ ಇನ್ನೂ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಬಡವರಿಗೆ ನಿರ್ಗತಿಕರಿಗೆ ಸಹಾಯ ಹಸ್ತ ಚಾಚಿದೆ. ಇದೇ ಸಂದರ್ಭದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಬಿ ವಸಂತ್ ಅವರು ತಮ್ಮ ಸಂಘದ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಇನ್ನೂ ಈ ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಗಿರೀಶ್ ಎ ವಲಯದ
ಯೋಜನಾಧಿಕಾರಿ ಸಾರಮ್ಮ ಸಂಘದ ಕಚೇರಿ ಸಿಬ್ಬಂದಿ ವಿಷ್ಣು ಇತರರು ಹಾಜರಿದ್ದರು.

ವರದಿ-ಯಶ್ವಂತ್ ಕೆ.ಎಸ್ ಎಕ್ಸ್ ಪ್ರೆಸ್ ಟಿವಿ ಬಾಗೇಪಲ್ಲಿ

Click to comment

Trending

Exit mobile version