ತಿಪಟೂರು

ಗುಂಡಿ ಮುಚ್ಚಿ, ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿ..!

Published

on

ತಿಪಟೂರು: ತಿಪಟೂರು ನಗರದ ಡಿ.ಸಿ.ಸಿ.ಬ್ಯಾಂಕ್ ಮುಂಭಾಗ ಇರುವ ನೀರಿನ ಪೈಪ್ಲೈನ್ ಹೊಡೆದು ನೀರು ಸೋರಿಕೆಯಾಗುತ್ತಿದೆ ಎಂಬ ವರದಿ ಬಂದ ತಕ್ಷಣವೇ ನಗರಸಭೆಯ ಅಧಿಕಾರಿಗಳು ಸ್ಪಂದಿಸದ್ದನ್ನು ನೋಡಿ ಜನರಿಗೆ ಸಂತೋಷವು ಆಯಿತು. ಈ ಗುಂಡಿಯನ್ನು ತೋಡಿ ಕುಡಿಯುವ ನೀರಿನ ಪೈಪ್ಲೈನ್ ದುರಸ್ತಿ ಮಾಡಿದ್ದು ಸರಿಯಾಗಿತ್ತು. ಆದರೆ ದುರಸ್ತಿ ಕಾರ್ಯ ನಡೆದು ಹದಿನೈದು ದಿನಗಳು ಕಳೆದರೂ ಗುಂಡಿ ಮುಚ್ಚದೇ ಪಾದಚಾರಿಗಳು ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ನಗಗರದಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೇ ರಸ್ತೆಯ ಪಕ್ಕದಲ್ಲಿ ಬೇಕಂದರಲ್ಲಿ ವಾಹನಗಳನ್ನು ನಿಲ್ಲಿಸುವುದು ವಾಡಿಕೆಯಾಗಿದೆ.ಇದರಿಂದ ಪಾದಚಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀರಾ ತೊಂದರೆಯಾಗುತ್ತಿದ್ದು, ಹೆಚ್ಚಿನ ಅಪಘಾತಗಳು ಕೂಡ ಸಂಭವಿಸುತ್ತಿವೆ ಆದ್ದರಿಂದ ಕೂಡಲೇ ಪೈಪ್ಲೈನ್ ರಿಪೇರಿಗೆ ತೆಗೆದಿರುವ ಗುಂಡಿಯನ್ನು ನಗರಸಭೆಯ ಅಧಿಕಾರಿಗಳು ಮುಚ್ಚಿ ಸಾರ್ವಜನಿಕರ ಓಡಾಡಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ವರದಿ- ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version