ಹುಬ್ಬಳ್ಳಿ-ಧಾರವಾಡ

ಬೀದಿಬದಿ ವ್ಯಾಪಾರಿಗಳ ತೆರವು ಖಂಡಿಸಿ ಪ್ರತಿಭಟನೆ..!

Published

on

ಹುಬ್ಬಳ್ಳಿ: ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಹಾಗೂ ಶಾಶ್ವತ ವ್ಯಾಪಾರ ನೆಲೆ ಕಲ್ಪಿಸುವಂತೆ ಆಗ್ರಹಿಸಿ ನೂರಾರು ಬೀದಿಬದಿ ವ್ಯಾಪಾರಸ್ಥರು ಹಾಗೂ ಸಂಘಟನೆಗಳು ಹುಬ್ಬಳ್ಳಿ ನಗರದ ಪಾಲಿಕೆಗೆ ಇಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಡ ಬೀದಿಬದಿಯ ವ್ಯಾಪಾರಸ್ಥರು ತಮ್ಮ ಹೊಟ್ಟೆ ಪಾಡಿಗಾಗಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅವರನ್ನು ಸ್ಮಾಟ್ಸಿಟಿ ಯೋಜನೆಯಡಿ ಬಲವಂತವಾಗಿ ತೆರವು ಮಾಡಿಸಿದ್ದು ಖಂಡನೀಯವಾಗಿದೆ. ನಗರದ ಪ್ರಮುಖ ಸ್ಥಳಗಳಾದ ದುರ್ಗದಬೈಲ್, ಶಾಬಜಾರ ರಸ್ತೆ, ಬೆಳಗಾವಿ ಗಲ್ಲಿ, ಕೆಸಿಡಿ ರಸ್ತೆ, ಇತರ ಸ್ಥಳಗಳಲ್ಲಿ ಮಾರಾಟ ಮಾಡುವ ವ್ಯಾಪಾರಸ್ಥರನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಅವರೆಲ್ಲರ ಸಾಮಗ್ರಿಗಳನ್ನು ಜಪ್ತಿ ಮಾಡಿ ದಂಡವನ್ನು ಸಹ ಕಟ್ಟಿಸಿಕೊಳ್ಳಲಾಗುತ್ತಿದೆ ಎಂದು ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಆರೋಪಿಸಿದರು. ಡಿಸೆಂಬರ್ 2 ಶನಿವಾರದಂದು ಸಮತಾ ಸೇನಾ ಹಾಗೂ ವಿವಿಧ ದಲಿತ ಪರ ಸಂಘ, ಸಂಸ್ಥೆಗಳ ವತಿಯಿಂದ ನಡೆದ ಸುದ್ದಿಗೋಷ್ಠಿ ಆಯೋಜಿಸಿ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಮೂರು ದಿನ ಗಡವು ನೀಡಲಾಗಿತ್ತು. ಆದರೆ ಸೂಕ್ತ ಸ್ಪಂದನೆ ಇಲ್ಲದೆ ಇಂದು ಗುರುನಾಥ ಉಳ್ಳಿಕಾಶಿ ಅವರ ನೇತೃತ್ವದಲ್ಲಿಂದು ದಲಿತ ಪರ ಸಂಘಟನೆಗಳು ಹು.ಧಾ.ಮ. ಪಾಲಿಕೆಯ ಆಯುಕ್ತರ ಕಛೇರಿ ಎದುರು ಪ್ರತಿಭಟನೆ ನಡೆಸಿ, ಈ ಕೂಡಲೇ ಬೀದಿಬದಿ ವ್ಯಾಪಾರಸ್ಥರ ಸಾಮಗ್ರಿಗಳನ್ನು ವಾಪಸ್ ಕೊಡುವಂತೆ ಹಾಗೂ ಅವರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಪಾಲಿಕೆಗೆ ಮುತ್ತಿಗೆ ಹಾಕಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.ಇನ್ನೂ ಈ ಸಂದರ್ಭದಲ್ಲಿ ಪ್ರೇಮನಾಥ ಚಿಕ್ಕತುಂಬಳ, ಬೀದಿಬದಿ ವ್ಯಾಪಾರಸ್ಥರು ಹಾಗೂ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version