ಮಂಡ್ಯ

ಭತ್ತ ವೈವಿದ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆವಿ ವೆಂಕಟೇಶ್ ಭೇಟಿ..!

Published

on

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಭತ್ತ ವೈವಿದ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆವಿ ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಿರುಗಾವಲು ಗ್ರಾಮದಲ್ಲಿರುವ ಸೈಯದ್ ಘನಿಖಾನ್ ರವರು 1350 ದೇಶಿ ಹಾಗೂ ವಿದೇಶಿ ಭತ್ತತಳಿ ಬೆಳೆದಿದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ ವೆಂಕಟೇಶ್ ರವರು ಭೇಟಿ ಸೈಯದ್ ಘನಿ ಖಾನ್ ರವರಿಂದ ಹಾಗೂ ಅವರ ಪುತ್ರ ಸೈಯದ್ ಮಹಮದ್ ಪುಟ್ಟ ಬಾಲಕನಿಂದ ಮಾಹಿತಿ ಪಡೆದುಕೊಂಡರು. ಇದಲ್ಲದೆ ಅವರು ಬೆಳೆದ ಜಮೀನಿಗಳಿಗೆ ಬೇಟಿ ನೀಡಿದರು. ಬಳಿಕ ವಾಹಿನಿಯೊಂದಿಗೆ ಜಿಲ್ಲಾಧಿಕಾರಿ ಡಾ.ಕೆ ವಿ ವೆಂಕಟೇಶ್ ಮಾತನಾಡಿ, ಘನಿ ಖಾನ್ ರವರು ಭತ್ತತಳಿ ಸಂರಕ್ಷಣೆ ಮಾಡುವಲ್ಲಿ ಗಣನೀಯ ಸಾಧನೆ ಮಾಡಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇನ್ನೂ ಈ ಕುಟುಂಬವೇ ಭತ್ತದ ತಳಿ ಸಂರಕ್ಷಣೆ ಮಾಡಲು ಪಣ ತೊಟ್ಟಿದ್ದಾರೆ, ಇವರ ರೀತಿ ಪ್ರತಿಯೊಬ್ಬ ರೈತರು ಮಾಡುವಂತೆ ಕರೆ ನೀಡಿದರು. ಇನ್ನೂ ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ವಿಜಯಣ್ಣ, ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕಿ ಮಮತ , ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹದೇವ, ಉಪತಹಶೀಲ್ದಾರ್ ,ದೀಪಕ್ ಕಿರುಗಾವಲು ಹೋಬಳಿ ಅಧ್ಯಕ್ಷರು ಬಿಜೆಪಿ ಅನಿಲ್ ಮಂಡ್ಯ ಜಿಲ್ಲಾ ಮೀನುಗಾರಿಕಾ ಪ್ರಕೋಷ್ಠ ಸಂಚಾಲಕ ಶ್ರೀಧರ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version