ರಾಯಚೂರು

ಶಾಲೆ ಆರಂಭದ ಬೆನ್ನಲ್ಲೆ ನಾಲ್ಕು ಶಿಕ್ಷಕರಿಗೆ ಕೊರೊನಾ ಪಾಸಿಟಿವ್..!

Published

on

ರಾಯಾಚೂರು: ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರಂಭದಲ್ಲಿ ಸರ್ಕಾರ ಜಿದ್ದಿಗೆ ಬಿದ್ದು, ಶಾಲೆ ಆರಂಭಿಸಿದೆ. ಪೋಷಕರ ವಿರೋಧದ ನಡುವೆಯು ವಿದ್ಯಾಗಮನ ತರಗತಿಗೆ ಅನುಮತಿ ನೀಡಲಾಗಿದ್ದು, ಜಿಲ್ಲಾ ಶಿಕ್ಷಣ ಇಲಾಖೆಯ ಎಡವಟ್ಟಿನಿಂದ ಜಿಲ್ಲೆಯಲ್ಲಿ 4 ಶಿಕ್ಷಕರಿಗೆ ಸೋಂಕು ದೃಡಪಟ್ಟಿದೆ.ಚಾಗಬಾವಿ ಸೇರಿದಂತೆ ಜಿಲ್ಲೆಯಲ್ಲಿ 5 ಸೋಂಕಿನ ಪ್ರಕರಣ ಎಂದು ದಾಖಲಾತಿಯಲ್ಲಿ ನಮೂದಿಸಲಾಗಿದೆ. ಆದರೆ 4 ಶಿಕ್ಷಕರಿಗೆ ಮಾತ್ರ ಕೊರೋನಾ ಸೋಂಕು ದೃಡಪಟ್ಟಿದೆ.ದಾಖಲಾತಿಯಲ್ಲಿ ಐದು ಸೋಂಕು ಎಂದು ತೋರಿಸಿದ್ದಾರೆ. ಮಾಹಿತಿ ಇಲ್ಲದೇ ತಪ್ಪಾಗಿ ದಾಖಲಾತಿ ನಮೂದಿಸಿದ ಅಧಿಕಾರಿ ಯಾರು ಎಂಬುವುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ.ಬೇಜಾವಬ್ದಾರಿತನದಿಂದ ವರ್ತಿಸಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು,ಇನ್ನಾದರೂ ಗಂಭೀರತೆ ಅರ್ಥೈಸಿಕೊಂಡು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಕೋವಿಡ್ ನ್ನು ನಿಯಂತ್ರಣಕ್ಕೆ ತರುವ ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ.

ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ಪ್ರೆಸ್ ಟಿವಿ ರಾಯಚೂರು

Click to comment

Trending

Exit mobile version