ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಹಕ್ಕಿಜ್ವರದ ಭೀತಿ…!

Published

on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಹೊರವಲಯದ ಗೋಪಾಲಕೃಷ್ಣ ಅಮಾನಿ ಕೆರೆಯಲ್ಲಿ ಎರಡು ಹಕ್ಕಿಗಳು ಸಾವಿಗೀಡಾಗಿ ಇನ್ನೇರೆಡು ಹಕ್ಕಿಗಳು ಅಸ್ವಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತು ಪಶುವೈದ್ಯ ಇಲಾಖೆಗಳಿಂದ ಮೃತ ಪಕ್ಷಿಗಳನ್ನು ಗುರುತಿಸಿ ಅವುಗಳ ಮರಣೋತ್ತರ ಪರೀಕ್ಷೆಗೆ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಅಸ್ವಸ್ಥಗೊಂಡ ರಷ್ಯಾ ಮೂಲದ ಬ್ಲಾಕ್ ಪೆದರ್ ಟಿಲ್ಟ್ ಮತ್ತು ಬಾರತದ ಸ್ಥಳೀಯ ಪಕ್ಷಿಗಳಿಗೆ ಚಿಕಿತ್ಸೆಗಾಗಿ ಪಶು ವೈದ್ಯಕೀಯ ಇಲಾಖೆ ಮುದ್ದಾಗಿದೆ. ಬೆಂಗಳೂರಿನ ಹೆಬ್ಬಾಳ, ನಾಗವಾರ ಕೆರೆಯ ಕೊಳಚೆ ನೀರು ಸಂಸ್ಕರಿಸಿ ಗೋಪಾಲಕೃಷ್ಣ ಅಮಾನಿ ಕೆರೆಗೆ ಹರಿಸಿದ್ದು ಕೆರಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳು ಆಗಮಿಸಿದ್ದು, ಇದರಲ್ಲಿ ವಿದೇಶಿ ಹಕ್ಕಿಗಳು ಇವೆಯಂತೆ. ಇನ್ನೂ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹಕ್ಕಿ ಜ್ವರವೋ ಅಥವಾ ಹೆಬ್ಬಾಳ-ನಾಗವಾರ ವ್ಯಾಲಿ ನೀರಿನಿಂದ ಸಾವಾಗಿದೆಯೋ ಎಂದು ತೀರ್ಮಾನ ಆಗಲಿದೆ.ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ಪತ್ತೆಯಾಗಿರುವ ಹಿನ್ನೆಲೆ ಚಿಕ್ಕಬಳ್ಳಾಪುರಕ್ಕೂ ಈ ಹಕ್ಕಿ ಜ್ವರ ಕಾಲಿಟ್ಟಿದೆಯಾ ಎಂಬ ಆತಂಕ ಜನರಲ್ಲಿ ಸೃಷ್ಟಿಯಾಗಿದೆ.

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version