ಮೊಳಕಾಲ್ಮೂರು

ರೈತರ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ…!

Published

on

ಮೊಳಕಾಲ್ಮುರ: ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಾಗೂ ಜನವಿರೋಧಿ ವಿದ್ಯುತ್ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸಿ ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟ ಬೆಂಬಲಿಸಿ ಮೊಳಕಾಲ್ಮೂರಿನಲ್ಲಿ ಸಿಐಟಿಯು ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.ಮೊಳಕಾಲ್ಮೂರು ತಾಲ್ಲೂಕಿನ ಕೆಇಬಿ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ್ರು.ಇನ್ನೂ 3 ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಮೊಳಕಾಲ್ಮುರು ತಹಶೀಲ್ದಾರ್ ಮೂಲಕ ಮೇಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ಸಿಐಟಿಯುನ ತಾಲೂಕು ಅಧ್ಯಕ್ಷರಾದ ಡಿ.ಎಂ ಮಲಿಯಪ್ಪ ಮಾತನಾಡಿ, ಪ್ರಧಾನಮಂತ್ರಿಗಳಿಗೆ ರೈತರ ಮೇಲೆ ಕಾಳಜಿ ಇಲ್ಲ 48 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ.ಈಗಾಗಲೇ ಕೆಲವು ರೈತರು ಮೃತಪಟ್ಟಿದ್ದಾರೆ.ಅಲ್ಲದೆ “ಕಾರ್ಮಿಕರ ಹಕ್ಕುಗಳನ್ನು ಉಳಿಸುತ್ತವೆ,ರೈತರ ಬದುಕನ್ನು ರಕ್ಷಿಸುತ್ತೇವೆ, ಕಾರ್ಪೊರೇಟ್ ಹಿಡಿತದಿಂದ ದೇಶವನ್ನು ಕಾಪಾಡುತ್ತೇವೆ ಎಂಬ ಪ್ರತಿಜ್ಞೆಯೊಂದಿಗೆ ಅಧಿಕಾರ ಹಿಡಿದ ಕೇಂದ್ರ ಸರ್ಕಾರ ರೈತರ ಜೀವನದಲ್ಲಿ ಆಟವಾಡುತ್ತಿದೆ ಎಂದು ಗುಡುಗಿದರು.

ವರದಿ- ಪಿ.ಎಂ ಗಂಗಾಧರ್ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರ

Click to comment

Trending

Exit mobile version