ಹುಬ್ಬಳ್ಳಿ-ಧಾರವಾಡ

ಬಾರಾ ಕೊಟ್ರಿಯಲ್ಲಿ ತುಂಬುತ್ತಿದೆ ಕಸದ ರಾಶಿ- ಕ್ಯಾರೇ ಅನ್ನದ ಬಿಬಿಎಂಪಿ ಅಧಿಕಾರಿಗಳು..!

Published

on

ಹುಬ್ಬಳ್ಳಿ: ಒಂದು ಕಡೆ ಸ್ವಚ್ಛ ನಗರ ಹಾಗೂ ಸ್ಮಾರ್ಟ್ ಸಿಟಿ ಕನಸು ಕಾಣುತ್ತಿರುವ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಪಾಲಿಕೆ ಕಸ ವಿಲೇವಾರಿ ಮಾಡುವುದನ್ನು ಮರೆತಂತೆಯ ಕಾಣುತ್ತಿದೆ. ಪರಿಣಾಮ ನಗರದಲ್ಲಿ ತ್ಯಾಜ್ಯ ವಿಲೇವಾರಿಯಾಗದೇ ರಸ್ತೆ ಉದ್ದಕ್ಕೂ ಕಸದ ರಾಶಿ ರಾರಾಜಿಸುತ್ತಿದೆ. ಮೊದಲೇ ದೇಶದಲ್ಲೇ ಕೊರೊನಾ ಹಾವಳಿ ತಪ್ಪಿಸಲು ಸರಕಾರ ಹರಸಾಹಸ ಪಡುತ್ತಿದೆ, ಅದರೊಂದಿಗೆ ಪ್ರತಿಯೊಂದು ನಗರದಲ್ಲಿ ಸ್ವಚ್ಚತೆ ಬಗ್ಗೆ ಗಮನ ಹರಿಸುವಂತೆ, ಸರಕಾರ ಮಹಾನಗರ ಪಾಲಿಕೆ ಆದೇಶ ನೀಡಿದೆ, ಇದರ ನಡುವೆಯೂ ಕೇಶ್ವಾಪೂರದ ಬಾರಾಕೊಟ್ರಿ ಬಳಿ ಅಧಿಕಾರಿಗಳ ಕರ್ತವ್ಯ ಲೋಪದಿಂದ ದಿನೇ ದಿನೇ ಕಸದ ಸಮಸ್ಯೆ ದ್ವಿಗುಣಗೊಳ್ಳುತ್ತಿದೆ. ಪರಿಣಾಮ ಸ್ಮಾರ್ಟ್ ಸಿಟಿಯ ಕನಸು ಇನ್ನೂ ಕಗ್ಗಂಟಾಗುತ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು.ಮತ್ತು ಬಹುತೇಕ ರಸ್ತೆಯ ತುಂಬಾ ಕಸದ ರಾಶಿ ತುಂಬಿದೆ, ಅದರಿಂದ ಕೆಟ್ಟ ವಾಸನೆ ಬರುತ್ತಿದ್ದು, ಮನೆಯಲ್ಲಿ ವಾಸಿಸಲು ಸಹ ಆಗುತ್ತಿಲ್ಲ,ಎಂಬಾ ಆರೋಪ ಕೇಳಿ ಬರುತ್ತಿದೆ.ಆದ್ರೆ ಅಧಿಕಾರಿಗಳು ಮಾತ್ರ ಕಸದ ರಾಶಿ ರಸ್ತೆಯಲ್ಲಿ ಬಿದ್ದಿದ್ದರು ಅದನ್ನು ತೆರವುಗೊಳಿಸದೇ ಕಣ್ಮುಚ್ಚಿ ಕುಳಿತಿದ್ದಾರೆ.

ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version