Uncategorized

ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ನಿಂತ ಅಪ್ರಾಪ್ತರ ವಿವಾಹ..!

Published

on

ಬಾಗೇಪಲ್ಲಿ: ಸರ್ಕಾರ ಬಾಲ್ಯ ವಿವಾಹ ನಿಯಂತ್ರಣ ಮಾಡಲು ಏನೇ ಹರಸಾಹಸ ಪಟ್ಟರೂ ಇದು ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಜನರು ವರ್ತಿಸುತ್ತಾರೆ ಎನ್ನುವುದಕ್ಕೆ ಇಲ್ಲಿ ನಿಂತ ಬಾಲ್ಯ ವಿವಾಹದ ಪ್ರಸಂಗವೇ ಸಾಕ್ಷಿಯಾಗಿದೆ. ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗುವ್ವಲವಾರಪಲ್ಲಿಯಲ್ಲಿ . ಇಲ್ಲೊಂದು ಜೋಡಿ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದರು. ಎಲ್ಲಾ ಅಂದುಕೊಂಡ ಹಾಗೆ ಹಾಗಿದ್ದರೆ ಇಷ್ಟೋತ್ತಿಗೆ ಆ ಜೋಡಿ ದಾಪಂತ್ಯ ಜೀವನಕ್ಕೆ ಕಾಲಿಡಬೇಕಾಗಿತ್ತು, ಅಧಿಕಾರಿಗಳ ಹಾಗೂ ಪೊಲೀಸರ ಸಮಯ ಪ್ರಜ್ಞೆಯಿಂದ ನಡೆಯ ಬೇಕಿದ್ದ ಬಾಲ್ಯವಿವಾಹ ನಿಂತಿದೆ. ಇದೀಗ ಅಪ್ರಾಪ್ತ ಬಾಲಕಿ ಮತ್ತು ಬಾಲಕ ಪರಾರಿಯಾಗಿದ್ದಾರೆ. ಗುವ್ವಲವಾರಪಲ್ಲಿ 20 ವರ್ಷ ಹುಡುಗನ ಜೊತೆ ಆಂಧ್ರಪ್ರದೇಶದ 15 ವರ್ಷದ ಅಪ್ರಾಪ್ತ ಬಾಲಕಿಯ ಜೊತೆ ಇಂದು ಬೆಳಗ್ಗೆ ಮದುವೆ ನಡೆಯುತ್ತಿದ್ದು ಇದನ್ನು ಗಮನಿಸಿದ ಗ್ರಾಮಸ್ಥರು ಮಕ್ಕಳ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಮದುವೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ- ಯಶ್ವಂತ್ K.S ಎಕ್ಸ್ ಪ್ರೆಸ್ ಟಿವಿ ಬಾಗೇಪಲ್ಲಿ

Click to comment

Trending

Exit mobile version