ಹುಬ್ಬಳ್ಳಿ-ಧಾರವಾಡ

ರಾಷ್ಟ್ರೀಯ ಆಹಾರ ಭದ್ರತಾ ಕಾರ್ಯಕ್ರಮ ರೈತರಿಗೆ ಸಲಹೆ..!

Published

on

ಹುಬ್ಬಳ್ಳಿ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಗುಡೇನಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಕೃಷಿ ಅಧಿಕಾರಿ ಅಂಬಿಕಾ ಮಹೇಂದ್ರಕರ ಮಾತನಾಡಿದರು. ಈ ವೇಳೆ ರೈತರು ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಬಿತ್ತನೆಯ ಗೋಧಿ, ಕಡಲೆ, ಕುಸುಬೆ, ಜೋಳದ ಬೀಜ ಪಡೆದು ಭೂಮಿಯಲ್ಲಿ ಬಿತ್ತನೆ ಮಾಡಿದ್ದಿರಾ, ಭೂಮಿಯೂ ಅತಿವೃಷ್ಟಿ ಪರಿಣಾಮ ಈ ಬಾರಿ ಅತಿ ಹೆಚ್ಚು ನೀರಿನಾಂಶ ಹೊಂದಿದ್ದು ಹಿಂಗಾರು ಬೆಳೆಗಳಿಗೆ ಪೂರಕವಾಗಲಿದೆ.ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ನಾವು ಆ ಬೆಳೆ ಪರಿಶೀಲನೆಗೆ ಬಂದಿದ್ದೇವೆ ಎಂದರು. ಇನ್ನೂ ಈ ಸಂದರ್ಭದಲ್ಲಿ ಗುಡೇನಕಟ್ಟಿ ಗ್ರಾಮ ರೈತ ಮುಖಂಡ ಬಸವರಾಜ ಯೋಗಪ್ಪನವರ, ಹನುಮಂತ ಸಿದ್ದೂನವರ, ಶಿವಾನಂದ ಕಳಸಣ್ಣನವರ, ಯಲ್ಲಪ್ಪ ಸತ್ಯಣ್ಣನವರ ಉಪಸ್ಥಿತರಿದ್ದರು.

ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version