ತಿಪಟೂರು

ಸೇತುವೆ ನಿರ್ಮಾಣಕ್ಕಾಗಿ ಬೈಪಾಸ್ ರಸ್ತೆ ತಡೆ- ಗ್ರಾಮಸ್ಥರ ಆಕ್ರೋಶ..!

Published

on

ತಿಪಟೂರು: ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರೈತ ವಿರೋಧಿ ಧೋರಣೆ ನಡೆಸುತ್ತಿದ್ದಾರೆ ಎಂದು ತಿಪಟೂರು ತಾಲ್ಲೂಕು, ಕಸಬಾ ಹೋಬಳಿ, ಮಾದಿಹಳ್ಳಿ ಗ್ರಾಮಸ್ಥರು ರಸ್ತೆಯಲ್ಲಿ ಧರಣಿ ನಡೆಸುತ್ತಿದ್ದಾರೆ.ಮಾದಿಹಳ್ಳಿ ಸರ್ವೆ ನಂಬರ್ 8,9,10,11,12,13 ಮತ್ತು 304ರ ಸರ್ಕಾರಿ ಖರಾಬು ಜಮೀನುಗಳಲ್ಲಿ,ಸರಿ ಸುಮಾರು 10 ರಿಂದ 20 ಅಡಿ ಎತ್ತರದ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾದುಹೋಗಿದ್ದು, ಈ ರಸ್ತೆಗೆ ಲಗತ್ತಾಗಿರುವ ಅಕ್ಕಪಕ್ಕದ ಗ್ರಾಮದ ರೈತರು, ಮಾದಿಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಪ್ರತಿದಿನ ಸುಮಾರು 50 ರಿಂದ 100ರೈತರು ಹಾಲನ್ನು ಹಾಕುತ್ತಿದ್ದಾರೆ, ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಾದಿ ಹಳ್ಳಿಯಿಂದ ಕೊಬ್ಬರಿ ದೊಡ್ಡಯ್ಯನ ಪಾಳ್ಯ ಮತ್ತು ವಾಸುದೇವರಹಳ್ಳಿಗೆ ಪ್ರತಿದಿನ ರೈತರು, ಕೃಷಿ ಕಾರ್ಮಿಕರು, ದನ ಕರುಗಳು, ಟ್ರ್ಯಾಕ್ಟರ್ ಜೆಸಿಬಿ ಇನ್ನೀತರ ಯಂತ್ರಗಳು ಹಾಗೂ ಇದೆ ಮಾದಿಹಳ್ಳಿ ಸರ್ಕಾರಿ ಜಮೀನಿನಲ್ಲಿ ಶ್ರೀ ಸಿದ್ಧಪ್ಪ ದೇವಸ್ಥಾನ ಮತ್ತು ಶ್ರೀ ಗಂಗಮ್ಮ ನವರ ಕ್ಷೇತ್ರಕ್ಕೆ ಪ್ರತಿದಿನ ಭಕ್ತಾದಿಗಳು ಕಾಲು ನಡಿಗೆಯಲ್ಲಿ ಹಾಗೂ ದ್ವಿಚಕ್ರ ವಾಹನಗಳ ಮೂಲಕ ಸಂಚರಿಸುತ್ತಿದ್ದು 3 ಸೇತುವೆಗಳ ಅವಶ್ಯಕತೆಯಿದೆ. ಆದ್ದರಿಂದ ಸರ್ಕಾರ ಸೇತುವೆಗಳನ್ನು ನಿರ್ಮಿಸದೆ ಹೋದರೆ ಪ್ರತಿದಿನ ರೈತರು 8 ರಿಂದ 10 ಕಿ ಮೀ ಬಳಸಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗುತ್ತದೆ.ಸರ್ಕಾರ ಹಾಗೂ ಜನಪ್ರತಿನಿಧಿಗಳು ಸೇತುವೆಯನ್ನು ನಿರ್ಮಿಸಿ ಕೊಡಬೇಕೆಂದು ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲ ಮಾಡಿ ಕೊಡಬೇಕೆಂದು ಎಂ ದಯಾನಂದ ಸ್ವಾಮಿ ಗ್ರಾಮಸ್ಥರ ಪರವಾಗಿ ಕೇಳಿಕೊಂಡರು.ಇದೇ ಸಂದರ್ಭದಲ್ಲಿ ಎಂ.ದಯಾನಂದ ಸ್ವಾಮಿ ಪ್ರಕಾಶ್ ಕೆಎಂಎಫ್ ನಿರ್ದೇಶಕರು, ಗಂಗಾಧರಯ್ಯ ಮಾಜಿ ಎಪಿಎಂಸಿ ನಿರ್ದೇಶಕರು,ಮಾಧುಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರು, ಯೋಗಾನಂದ್ ವಕೀಲರು, ಪ್ರಭುಸ್ವಾಮಿ ಎಂ ಎಸ್, ಪ್ರಭುಸ್ವಾಮಿ ನವಿಲೆ, ಯಡಿಯೂರಪ್ಪ, ಕುಮಾರಸ್ವಾಮಿ, ಷಡಾಕ್ಷರಿ,ಸಿದ್ದಮಲ್ಲಯ್ಯ, ಬಸವರಾಜು ಇನ್ನೂ ಮುಂತಾದ ಮಾದಿಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ-ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version