ಅಫಜಲಪೂರ

ಹಜರತ್ ಖ್ವಾಜಾ ಸೈಫನ್ ಮುಲ್ಕ್ ಜಾತ್ರಾ ಮಹೋತ್ಸವ..!

Published

on

ಅಫಜಲಪೂರ: ಬೇಡಿದವರಿಗೆ ಬೇಡಿದ್ದನ್ನು ಕಲ್ಪಿಸುವ ಕಾಮಧೇನು ಕಲ್ಪವೃಕ್ಷವಾಗಿ ಶೋಬಿಸುತ್ತಿರುವ ಶ್ರೀ ಹಜರತ್ ಖ್ವಾಜಾ ಸೈಫನ್ ಮುಲ್ಕ್ 887 ನೇ ಜಾತ್ರಾ (ಉರುಸ್) ಮಹೋತ್ಸವವು ಅದ್ದೂರಿಯಾಗಿ ಜರುಗಿತು.ಕನಾ೯ಟಕ ಮಹಾರಾಷ್ಟ್ರ ಗಡಿಬಾಗದ ಕುಭೇರ ಕರಜಗಿ ಗ್ರಾಮದಲ್ಲಿ ಸಾವಿರಾರು ಭಕ್ತರ ಮದ್ಯೆ ಅದ್ದೂರಿಯಾಗಿ ಜಾತ್ರೆ ನಡೆಯಿತು. ನಿನ್ನೇ ರಾತ್ರಿ 10 ಗಂಟೆಗೆ ಗಂಧದ ಬಂಡಿ ದೇವಸ್ಥಾನದಿಂದ ಅತಿ ವಿಜ್ರಂಭಣೆಯಿಂದ ವ್ಯಾದ್ಯ ವೃಂಧದೊಂದಿಗೆ ಹಾಗೂ ರಂಗು ರಂಗಿನ ಮದ್ದಿನ ಸುರಿಮಳೆಯೊಂದಿಗೆ ಕನಾ೯ಟಕದ ಗಡಿಭಾಗದ ಮಹಾರಾಷ್ಟ್ರದ ಹೈದ್ರಾ ಗ್ರಾಮಕ್ಕೆ ಹೋಗಿ ಮರಳಿ ಬೆಳಿಗ್ಗೆ 12 ಗಂಟೆಗೆ ಸಾವಿರಾರು ಭಕ್ತರ ಜಯಗೋಶದೊಂದಿಗೆ ಗಂಧದ ಬಂಡಿ ರೈತರ ಬಂಡಿಯನ್ನು ಅದ್ದೂರಿಯಾಗಿ ಬಂದು ತಲುಪಿತು.ಇನ್ನೂ ಈ ವೇಳೆ ರೈತರು, ಯುವಕರು,ಎತ್ತುಗಳನ್ನ ಗಂಧದ ಬಂಡಿಯ ಹಿಂದೆ ತಮಟೆ ವಾದ್ಯಗಳೊಂದಿಗೆ ಕುಣಿತದಿಂದ ಎತ್ತುಗಳ ಮೇರವಣಿಗೆ ನೋಡುಗರ ಮನರಂಜಿಸುತ್ತಿತ್ತು.

ವರದಿ-ಉಮೇಶ್ ಅಚಲೇರಿ ಎಕ್ಸ್ ಪ್ರೆಸ್ ಟಿವಿ ಅಫಜಲಪೂರ

Click to comment

Trending

Exit mobile version