Uncategorized

ಅಕ್ರಮ ಗಣಿಗಾರಿಕೆಗೆ ನಿರ್ಬಂಧ-ಎಕ್ಸ್ ಪ್ರೆಸ್ ಟಿವಿ ವರದಿಗೆ ಎಚ್ಚೇತ್ತ ಅಧಿಕಾರಿಗಳು..!

Published

on

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಕೂಗಳತೆಯ ದೂರದ ತಿರುಮಲಪುರ ಕಾಲೋನಿ-ಭೀಚನಹಳ್ಳಿ ಸಮೀಪ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ತಹಸೀಲ್ದಾರ್ ಕುಂಞ ಅಹಮ್ಮದ್ 145 ಸೆಕ್ಷನ್ ಜಾರಿ ಮಾಡುವ ಮೂಲಕ ಗಣಿಗಾರಿಕೆ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ಏರಿದ್ದಾರೆ. ಇಲ್ಲಿನ ಅಕ್ರಮ ಗಣಿಗಾರಿಕೆಯ ವಿರುದ್ದ ಎಕ್ಸ್ಪ್ರೆಸ್ ಟಿವಿ ಬೀದಿಗೆ ಬಿದ್ದ ರೈತರ ಬದುಕು ಎಂಬ ಶೀರ್ಷಿಕೆಯಡಿ ಪ್ರಸಾರ ಮಾಡಲಾಗಿದ್ದ ವರದಿಗೆ ಎಚ್ಚೇತ್ತ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಬೆಳ್ಳೂರು ಹೋಬಳಿ ಉಪತಹಸೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ತಂಡ ನೀಡಿದ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ತಹಸೀಲ್ದಾರ್ ಕುಂಞ ಅಹಮ್ಮದ್ ಭೇಟಿ ನೀಡಿ, ಗಣಿಗಾರಿಕೆ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ 145 ಸೆಕ್ಷನ್ ಜಾರಿಗೊಳಿಸಿದ್ದಲ್ಲದೆ, ಸ್ಥಳೀಯ ರೈತಾಪಿ ವರ್ಗ ಯಾವುದೇ ಅತಂಕಕ್ಕೊಳಗಾಗದಂತೆ ಆತ್ಮಸ್ಥೈರ್ಯ ತುಂಬಿದರು.ಒಟ್ಟಾರೆ ತಾಲ್ಲೂಕಿನಾಧ್ಯಂತ ಹೆಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ವಿರುದ್ದ ಕಚೇರಿಗಳಿಗೆ ಅಲೆದು ಬೆಸತ್ತಿದ್ದ ನಾಗರೀಕರ ಪರವಾಗಿ ನಿಂತಿರುವ ನಮ್ಮ ಎಕ್ಸ್ಪ್ರೆಸ್ ಟಿವಿ ಸಧ್ಯದಲ್ಲೆ ಮತ್ತಷ್ಟು ಅಕ್ರಮ ಗಣಿಗಾರಿಕೆಗಳ ವರದಿಯನ್ನು ಬಿತ್ತರಿಸುವ ಮೊದಲು ಅಧಿಕಾರಿ ವರ್ಗ ಕಡಿವಾಣ ಹಾಕುವ ಮೂಲಕ ರೈತಾಪಿ ವರ್ಗ ಸೇರಿದಂತೆ ಸಾರ್ವಜನಿಕರ ಹಿತಕಾಯಲಿ ಎಂಬುದು ನಮ್ಮ ಆಶಯ.

ವರದಿ- ಎಸ್.ವೆಂಕಟೇಶ್. ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version