ತಿಪಟೂರು

ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ- ಬಿ.ಸಿ ನಾಗೇಶ್..!

Published

on

ತಿಪಟೂರು: ನಗರದ ಎಪಿಎಂಸಿ ಯಾರ್ಡ್ ನಲ್ಲಿ ಆರಂಭವಾದ ರಾಗಿ ಖರೀದಿ ಕೇಂದ್ರಕ್ಕೆ ಶಾಸಕರಾದ ಬಿ.ಸಿ ನಾಗೇಶ್ ಚಾಲನೆ ನೀಡಿದರು.2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ರಾಗಿಯನ್ನು ಪ್ರತಿ ಕ್ವಿಂಟಾಲ್ ಗೆ 3295.ರಂತೆ ಖರೀದಿಸಲಾಗುವುದು. ರಾಗಿ ಖರೀದಿ ಕೇಂದ್ರದಲ್ಲಿ ಪೂರ್ಣ ಒಣಗಿದ ಹಾಗೂ ಸ್ವಚ್ಚಗೊಳಿಸಿ ಉತ್ತಮ ಗುಣಮಟ್ಟದ ಮತ್ತು ಗ್ರೇಂಡರ್ ಗಳಿಂದ ದೃಢೀಕರಿಸಿದ ಗುಣಮಟ್ಟದ ರಾಗಿ ಮಾತ್ರ ಖರೀದಿಸಲಾಗುವುದು ಕಳಪೆ ಗುಣಮಟ್ಟದ ರಾಗಿಯನ್ನು ತಿರಸ್ಕರಿಸಲಾಗುವುದು ಮತ್ತು ರೈತರು 2020-21ನೇ ಸಾಲಿಗೆ ನೋಂದಣಿಯನ್ನು ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ಗುರುತಿನ ಸಂಖ್ಯೆಯನ್ನು ತರುವುದು ಕಡ್ಡಾಯವಾಗಿದೆ. ಗುರುತಿನ ಸಂಖ್ಯೆಯೊಂದಿಗೆ ಖರೀದಿ ಕೇಂದ್ರಕ್ಕೆ ಬಂದು ತಮ್ಮ ಹೆಸರನ್ನು ದಾಖಲೆ ಮಾಡಿಸಿಕೊಳ್ಳ ತಕ್ಕದ್ದು ರೈತರು ಫ್ರೂಟ್ಸ್ ಗುರುತು ಸಂಖ್ಯೆಯನ್ನು ನಮೂದಿಸಿದ ನಂತರ ತಾವು ಬೆಳೆದ ರಾಗಿ ದಾಸ್ತಾನನ್ನು ಮಾದರಿಯೊಂದಿಗೆ ಖರೀದಿ ಕೇಂದ್ರಕ್ಕೆ ಬಂದು ಕೃಷಿ ಇಲಾಖೆ ನೇಮಿಸಿರುವ ಗ್ರೇಡರ್ ಗಳಿಂದ ಗುಣಮಟ್ಟ ಉತ್ತಮವಾಗಿದೆ ಎಂದು ದೃಢೀಕರಿಸಿದ ನಂತರ ರಾಗಿಯನ್ನು ನಿಗದಿತ ದಿನಾಂಕ ತಂದು ಮಾರಾಟ ಮಾಡಬಹುದು ಮಾರಾಟವಾದ ನಂತರ ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ- ಸಿದ್ಧೇಶ್ವರ ಸಿ ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version