Uncategorized

ಹಗಲಿನಲ್ಲಿ ಇಸ್ಪೀಟ್ ಆಟ.. ಸಂಜೆಯಾದರೇ ಕುಡುಕರ ಅಡ್ಡೆಯಾದ ಸರ್ಕಾರ ಶಾಲೆ..!

Published

on

ಕೊರಟಗೆರೆ: ಹಗಲಿನಲ್ಲಿ ಇಸ್ಪೀಟ್ ಆಟ.. ಸಂಜೆಯಾದರೇ ಕುಡುಕರ ಅಡ್ಡೆ.. ರಾತ್ರಿಯಿಡಿ ಕುರಿಮೇಕೆಯ ದೊಡ್ಡಿಯ ಜೊತೆ ಅನೈತಿಕ ಚಟುವಟಿಕೆಯ ತಾಣ ಆಗಿರುವ ಸರಕಾರಿ ಪ್ರಾಥಮಿಕ ಶಾಲೆಯ ಕಿಟಕಿ ಬಾಗಿಲುಗಳೇ ಮಾಯವಾಗಿವೆ. ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಾಣ ಆಗಿರುವ ಶಾಲಾ ಕಟ್ಟಡ, ಅಡುಗೆ ಕೊಠಡಿಗಳ ಮಾಹಿತಿಯೇ ಶಿಕ್ಷಕರಿಗೆ ಇಲ್ವಂತೆ, ಇದು ನಮ್ಮ ಕೊರಟಗೆರೆ ಶಿಕ್ಷಣ ಇಲಾಖೆಯ ಕತೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಕುರುಡುಗಾನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಭದ್ರತೆಯ ಜೊತೆ ಶಿಕ್ಷಣವು ಮರೀಚಿಕೆ ಆಗಿದೆ. ಸ್ಥಳೀಯ ಶಿಕ್ಷಕರ ದಿವ್ಯ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಾಣ ಆಗಿರುವ ಶಾಲಾ ಕಟ್ಟಡ, ಅಡುಗೆ ಕೊಠಡಿ, ನೀರಿನ ತೊಟ್ಟಿ, ಓವರ್ಹೆಡ್ ಟ್ಯಾಂಕ್, ನೀರಿನ ಟ್ಯಾಂಕು, ಕೊಳವೆಬಾವಿ, ಶೌಚಾಲಯವು ಸಂಪೂರ್ಣ ನಾಶವಾಗಿವೆ. ಇನ್ನೂ ಕುರುಡುಗಾನಹಳ್ಳಿ ಗ್ರಾಮದ 130 ಮನೆಗಳಲ್ಲಿ 617 ಮತದಾರರು ಇದ್ದಾರೆ. ಇದೇ ಹಳೆಯ ಸರಕಾರಿ ಪ್ರಾಥಮಿಕ ಪಾಠಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ. 1 ರಿಂದ 5 ನೇ ತರಗತಿಯಲ್ಲಿ 25 ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಕರ ಜೊತೆ ಮಕ್ಕಳಿಗೂ ಶೌಚಾಲಯ ಮರೀಚಿಕೆಯಾಗಿ ಬಯಲು ಬಹಿರ್ದೆಸೆಗೆ ಹೋಗುವುದರ ಜೊತೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿ ಶೌಚಾಲಯವೇ ಇಲ್ಲದ ಸರಕಾರಿ ಶಾಲೆ ಆಗಿರುವುದೇ ನಮ್ಮ ದುರ್ದೈವ. ಸರಕಾರಿ ಶಾಲೆಯ ಅಭಿವೃದ್ದಿ ಮತ್ತು ವಿದ್ಯಾರ್ಥಿಗಳ ವ್ಯಾಸಂಗದ ಭವಿಷ್ಯದ ದೃಷ್ಟಿಯಿಂದ ಕುರುಡುಗಾನಹಳ್ಳಿ ಗ್ರಾಮದ ರೈತ ಲೇ.ರಂಗಪ್ಪ ತನ್ನ 20 ಗುಂಟೆ ಜಮೀನು ಶಾಲಾ ಆಡಳಿತಕ್ಕೆ ದಾನವಾಗಿ ನೀಡಿದ್ದಾರೆ. ಶಿಕ್ಷಣ ಇಲಾಖೆ, ಗ್ರಾಪಂ ಮತ್ತು ಇತರೇ ಅನುಧಾನ ಬಳಕೆಯಿಂದ ಅಭಿವೃದ್ದಿ ಆಗಬೇಕಾದ ಶಾಲೆಯು ರಕ್ಷಕ ಮತ್ತು ರಕ್ಷಣೆ ಎರಡು ಇಲ್ಲದೇ ಶಾಲಾ ಕಟ್ಟಡಗಳು ಗ್ರಾಪಂ ಅಭ್ಯರ್ಥಿಗಳ ಬೆಂಬಲಿಗರ ಪಾರ್ಟಿಯ ಕೊಠಡಿಗಳಾಗಿ ಬದಲಾಗಿದೆ. ಹಗಲಿನಲ್ಲಿ ಪಾರ್ಟಿ ಮಾಡುವ ಕುಡುಕರ ತಂಡ ಕುಡಿದ ಅಮಲಿನಲ್ಲಿ ಮಧ್ಯದ ಬಾಟೇಲ್ ಹೊಡೆದು ಹಾಕಿದ್ದಾರೆ. ಶಾಲೆಯ ಒಳಗೆ ಮತ್ತು ಹೊರಗಡೆ ಮಧ್ಯದ ಬಾಟೇಲ್ ಚೆಲ್ಲಾಡುತ್ತೀವೆ. ನೀರಿನ ತೊಟ್ಟಿಯೊಳಗೆ ಗಾಜಿನ ಪುಡಿಗಳು ತುಂಬಿದ್ದು, ಕೊಳವೆಬಾವಿ ಕಾಣೆಯಾಗಿ ಶಾಲಾ ಆವರಣವು ದುರ್ವಾಸನೆ ಬೀರುತ್ತಿದೆ. ಕೊರಟಗೆರೆ ಶಿಕ್ಷಣ ಇಲಾಖೆ ತಕ್ಷಣ ಶಾಲೆಯ ಜೊತೆ ಶಿಕ್ಷಣಕ್ಕೆ ಹೆಚ್ಚಿನ ಭದ್ರತೆ ನೀಡಬೇಕಾಗಿದೆ. ಸರಕಾರಿ ಶಾಲೆಯ ಕಟ್ಟಡ ಕುಡುಕರ ತಾಣವಾದರೇ ಅಡುಗೆ ಕೊಠಡಿ ಕುರಿ ಮೇಕೆಯ ದೊಡ್ಡಿಯಾಗಿದೆ. ಇನ್ನೂ ಈ ವೇಳೆ ಮಾತನಾಡಿದ ಮಧುಗಿರಿ ಡಿಡಿಪಿಐ ರೇವಣ್ಣ ಸಿದ್ದಪ್ಪ ಸರಕಾರಿ ಶಾಲೆಗಳ ಸ್ವತ್ತಿನ ರಕ್ಷಣೆ ಶಿಕ್ಷಕರ ಜವಾಬ್ದಾರಿ. ಶಾಲೆಯ ಬಾಗಿಲು ಮತ್ತು ಕಿಟಕಿ ಮುರಿದು ಮಧ್ಯ ಸೇವೆನೆ ಮಾಡುತ್ತೀರುವ ವ್ಯಕ್ತಿಗಳ ವಿರುದ್ದ ದೂರು ನೀಡಲು ಕೊರಟಗೆರೆ ಬಿಇಓಗೆ ಸೂಚಿಸುತ್ತೇನೆ. ಪರವಾನಗಿ ಇಲ್ಲದೇ ಖಾಸಗಿಯಾಗಿ ಶಾಲೆ ಬಳಕೆಗೆ ಅವಕಾಶವಿಲ್ಲ. ನಾನೇ ಖುದ್ದಾಗಿ ಕುರುಡುಗಾನಹಳ್ಳಿ ಶಾಲೆಗೆ ಬೇಟಿ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ವರದಿ – ದೇವರಾಜ್ ಕೆ.ಎನ್ ಎಕ್ಸ್ ಪ್ರೆಸ್ ಟಿವಿ ಕೊರಟಗೆರೆ

Click to comment

Trending

Exit mobile version