Uncategorized

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1061ನೇ ಜಯಂತಿ..!

Published

on

ನಂಜನಗೂಡು: ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1061ನೇ ಜಯಂತಿ ಮಹೋತ್ಸವವನ್ನು ಸಿಎಂ ಯಡಿಯೂರಪ್ಪನವರು ಉದ್ಘಾಟಿಸಿದರು. ಇದೇ ಸಂದರ್ಭ ಸುತ್ತೂರು ಶ್ರೀ ಮಠದ ಪಂಚಾಂಗ ಹಾಗೂ ಕೃತಿ ಲೋಕಾರ್ಪಣೆ ಮಾಡಿದರು. ಬಳಿಕ ಸಿಎಂ ಮಾತನಾಡಿ ಹತ್ತು ಶತಮಾನಗಳ ಹಿಂದೆ ಲೋಕ ಕಲ್ಯಾಣಕ್ಕಾಗಿ ಕಪಿಲಾ ನದಿ ದಡದ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಹಾ ಸಂಸ್ಥಾನವನ್ನು ಸ್ಥಾಪಿಸಿದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ವರು ಶ್ರೇಷ್ಠ ಸಂತರಾಗಿದ್ದರು. ಅಂದು ಇವರ ದೂರದೃಷ್ಟಿಯಿಂದ ಸಾಮ್ರಾಜ್ಯ ವಿಸ್ತರಣೆಗಾಗಿ ಗಂಗ ಮತ್ತು ಚೋಳರ ನಡುವೆ ನಡೆಯಬೇಕಿದ್ದ ಘನಘೋರ ಯುದ್ಧವನ್ನು ತಡೆದು ಘೋರ ದುರಂತ ಒಂದನ್ನು ತಪ್ಪಿಸಿದ ಮಹಾನ್ ತಪಸ್ವಿ ಎಂದು ಆದಿ ಜಗದ್ಗುರುಗಳ ಮತ್ತು ಸುತ್ತೂರು ಶ್ರೀ ಕ್ಷೇತ್ರ ದಲ್ಲಿ ನಡೆಯುವ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳ ಅಭ್ಯುದಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತ ಬಂದಿರುವ ಇತ್ತೀಚಿನ ಜಗದ್ಗುರುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆರು ದಿನಗಳ ಕಾಲ ಲಕ್ಷಾಂತರ ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಜಾತ್ರಾ ಮಹೋತ್ಸವ ಇಂದು ಮಹಾಮಾರಿ ಕೊರೋನಾ ಹಿನ್ನೆಲೆ ರದ್ದಾಗಿ ಸಾಂಕೇತಿಕ ಹಾಗೂ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯರನ್ನು ಶ್ರೀಮಠದ ವತಿಯಿಂದ ಜಗದ್ಗುರು ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು. ಇನ್ನೂ ಕಾರ್ಯಕ್ರಮಕ್ಕೆ ವಿವಿಧ ಮಠಾಧಿಪತಿಗಳು, ಸಚಿವರುಗಳು, ಶಾಸಕರು, ಮಾಜಿ ಸಚಿವರು, ಶಾಸಕರು, ವಿವಿಧ ನಿಗಮ ಮಂಡಳಿ ಅಧ್ಯಕ್ಷರುಗಳು, ವಿವಿಧ ಕ್ಷೇತ್ರಗಳ ಗಣ್ಯರು, ಉಪಸ್ಥಿತರಿದ್ದರು.

ವರದಿ- ಮೋಹನ್ ಮತ್ತು ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ

Click to comment

Trending

Exit mobile version