Uncategorized

ರೈಲ್ವೇ ಜಂಕ್ಷನ್ ತಪಾಸಣೆ- ಜನರಲ್ ಮ್ಯಾನೇಜರ್ ಅಜಯ್ ಕುಮಾರ್…!

Published

on

ಬಂಗಾರಪೇಟೆ: ಬಂಗಾರಪೇಟೆಯ ರೈಲ್ವೇ ಜಂಕ್ಷನ್ ತಪಾಸಣೆ ಹಾಗೂ ಮಕ್ಕಳ ಉದ್ಯಾನವನ ಉದ್ಘಾಟನೆಗೆ ರೈಲ್ವೇ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಬಂಗಾರಪೇಟೆ ರೈಲ್ವೇ ಜಕ್ಷಂನ್ ಗೆ ಭೇಟಿ ನೀಡಿದರು. ಅಜಯ್ ಕುಮಾರ್ ಸಿಂಗ್ ಭೇಟಿ ನೀಡುವ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಅವರನ್ನು ಭೇಟಿ ಮಾಡಿದರು. ಜಿಜೆಪಿಯ ಮುಖಂಡರು ಜಿ.ಪಂ.ಸದಸ್ಯ ಮಹೇಶ್ ನೇತ್ರತ್ವದಲ್ಲಿ ಹುಣಸನಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯ ಹೆ.ಚ್.ಆರ್.ಶ್ರೀನಿವಾಸ್ ಮತ್ತು ಗ್ರಾಮಸ್ಥರು, ಹಾಗೂ ರೈತ ಸಂಘದ ಮುಖಂಡ ರಾಮೇಗೌಡ ಬಂಗಾರಪೇಟೆ ಮತ್ತು ಬೂದಿಕೊಟೆ ರಸ್ತೆ ಮಾರ್ಗದಲ್ಲಿ ಇರುವ ರೈಲ್ವೇ ಗೇಟ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನವು ಮಾಡಿ ಕೊಡಬೇಕೆಂದು ಅಜಯ್ ಕುಮಾರ್ ಸಿಂಗ್ ಮತ್ತು ಸಂಸದ ಮುನಿಸ್ವಾಮಿ ಅವರೊಡನೆ ತೆರಳಿ ಸ್ಥಳ ಪರಶೀಲನೆ ನಡೆಸುವಂತೆ ಒತ್ತಾಯ ಮಾಡುವ ಮೂಲಕ ಸ್ಥಳ ಪರಿಶೀಲನೆ ಮಾಡಿದರು. ಸಂಸದ ಮುನಿಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ ಬಂಗಾರಪೇಟೆ ಬೂದಿಕೋಟೆ ರಸ್ತೆಯಲ್ಲಿರುವ ಗೇಟ್ ಅನ್ನು ತೆರವುಗೊಳಿಸಲು ಸಹಾಯ ಮಾಡುವುದಾಗಿ ತಿಳಿಸಿದರು. ಕೊಯ್ಯಮತ್ತೂರು ರೈಲು ನಿಲುಗಡೆ ಮಾಡಿಸಲು ಒಪ್ಪಿಗೆ ಸೂಚಿಸಿದ್ದಾರೆ. ಕೊರೋನಾ ನಂತರ ಭಾರತದಲ್ಲಿ ಬುಕ್ಂಗ್ ರಹಿತ ರೈಲು ಪ್ರಯಾಣ ಆರಂಬಿಸಿಲ್ಲ ಆದರೆ ಮೊಟ್ಟಮೊದಲಿಗೆ ಸ್ವರ್ಣ ರೈಲನ್ನು ಬುಕ್ಕಿಂಗ್ ರಹಿತ ಓಡಾಟ ಪ್ರಾರಂಭಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಿ.ವಿ.ಮಹೇಶ್ ಅಂಬರೀಶ್, ಹೊಸರಾಯಪ್ಪ, ನಾಗೇಶ್, ಹನುಮಪ್ಪ ಹೆಚ್ಚ.ಆರ್. ಶ್ರೀನಿವಾಸ್,ಬಾಬು, ಮಹೇಶ್, ಜಗನ್, ನಾರಾಯಣಸ್ವಾಮಿ. ಇನ್ನೂ ಅನೇಕ ಮುಖಂಡರು ಹಾಜರಿದ್ದರು.

ವರದಿ- ಬಾಬು ಎಕ್ಸ್ ಪ್ರೆಸ್ ಟಿವಿ ಬಂಗಾರಪೇಟೆ

Click to comment

Trending

Exit mobile version