ನಿಮ್ಮ ಜಿಲ್ಲೆ

ನೌಕರರೇ ಗಮನಿಸಿ: ಬದಲಾಯ್ತು ಪಿಎಫ್ ವಿತ್ ಡ್ರಾ ನಿಯಮ

Published

on

ಇಪಿಎಫ್ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಪ್ರೊವಿಡೆಂಟ್ ಫಂಡ್ ಹೊಸ ನಿಯಮದಡಿ 60 ವರ್ಷಕ್ಕಿಂತ ಮೊದಲು ಶೇಕಡಾ 100ರಷ್ಟು ಪಿಎಫ್ ಹಣವನ್ನು ಡ್ರಾ ಮಾಡುವಂತಿಲ್ಲ. ಅಂದ್ರೆ ನಿವೃತ್ತಿಗೂ ಮುನ್ನ ನೀವು ನಿಮ್ಮ ಪಿಎಫ್ ನ ಎಲ್ಲ ಹಣವನ್ನು ಡ್ರಾ ಮಾಡಲು ಸಾಧ್ಯವಿಲ್ಲ.

ಹೊಸ ನಿಯಮದ ಪ್ರಕಾರ, ಯಾವುದೇ ವ್ಯಕ್ತಿ 60 ವರ್ಷಕ್ಕಿಂತ ಮೊದಲೇ ಕೆಲಸ ಬಿಟ್ಟರೂ ಆತ ಶೇಕಡಾ 75ರಷ್ಟು ಪಿಎಫ್ ಹಣವನ್ನು ಮಾತ್ರ ಹಿಂಪಡೆಯಬಹುದಾಗಿದೆ. ಸದ್ಯ ಪಿಎಫ್ ನ ಶೇಕಡಾ 100ರಷ್ಟು ಹಣವನ್ನು ನೌಕರ ಪಡೆಯಬಹುದಾಗಿತ್ತು. ಇಪಿಎಫ್‌ಒ ಎಲ್ಲ ನೌಕರರ ಪಿಎಫ್ ನಿಧಿಯನ್ನು ನೋಡಿಕೊಳ್ಳುತ್ತದೆ. ಇದ್ರಲ್ಲಿ 60 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ.

ನೌಕರನ ಸಂಬಳ 15 ಸಾವಿರಕ್ಕಿಂತ ಕಡಿಮೆಯಿದ್ರೆ ಆತನ ಸಂಬಳದಲ್ಲಿ ಪ್ರತಿ ತಿಂಗಳು ಶೇಕಡಾ 12ರಷ್ಟು ಭಾಗ ಪಿಎಫ್ ಖಾತೆ ಸೇರುತ್ತದೆ. ಕಂಪನಿ ಶೇಕಡಾ 8.33ರಷ್ಟು ಪಿಂಚಣಿ ಯೋಜನೆಗೆ ಹಾಗೂ ಶೇಕಡಾ 3.67ರಷ್ಟು ಇಪಿಎಫ್ ಗೆ ಹಣ ನೀಡುತ್ತದೆ. ನಿವೃತ್ತಿಗೂ ಮುನ್ನ ಅನೇಕರು ಪಿಎಫ್ ನ ಸಂಪೂರ್ಣ ಹಣ ಡ್ರಾ ಮಾಡಲು ಅರ್ಜಿ ಸಲ್ಲಿಸಿದ್ದರು. ಇದು ನಿವೃತ್ತಿ ನಂತ್ರ ನೌಕರರು ಹಾಗೂ ಅವ್ರ ಕುಟುಂಬದ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಕಾರಣಕ್ಕೆ ಹೊಸ ನಿಯಮ ಜಾರಿಗೆ ತಂದಿದೆ.

Click to comment

Trending

Exit mobile version