ಬೆಂಗಳೂರು ಗ್ರಾಮಾಂತರ

ಆಲೂರು ಪಂಚಾಯಿತಿ ಅವಿರೋಧ ಆಯ್ಕೆ ಸಾಧ್ಯತೆ!

Published

on

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಅವಿರೋಧ ಆಯ್ಕೆ ಆಗುವ ಸಾಧ್ಯತೆ ಇದ್ದು, ಕೇವಲ ಇನ್ನೂ ಒಂದೂವರೆ ವರ್ಷ ಅವಧಿ ಇರುವುದರಿಂದ ಅಷ್ಟೊಂದು ಹಣ ಖರ್ಚು ಅಧ್ಯಕ್ಷ ಆಗಬೇಕೆನ್ನುವ ಇರಾದೆಯಲ್ಲಿ ಯಾರು ಇರುವುದು ಕಂಡು ಬರುತ್ತಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈಗಾಗಲೇ ಎಲ್ಲರೂ ಕೂಡ ಹಣದ ಸಮಸ್ಯೆಯಲ್ಲೇ ಇರುವುದರಿಂದ ಯಾರು ಕೂಡ ಮುಂದೆ ಬರುವ ಮನಸ್ಸು ಮಾಡುತ್ತಿಲ್ಲ ಎನ್ನುವುದು ಕೆಲವರ ಮಾತು, ಹಾಗಾಗಿ ಈಗಾಗಲೇ ಆಕಾಂಕ್ಷಿಯಾಗಿರುವ ತ್ರಿವೇಣಿನರಸಿಂಹಮೂರ್ತಿಯವರು ಅಧ್ಯಕ್ಷ ಗಾದಿಗೆ ಆಯ್ಕೆಯಾಗುವ ನಿರೀಕ್ಷೆಗಳು ಹೆಚ್ಚಾಗಿವೆ.  ಇನ್ನೂ ಕೆಲವು ಮೂಲಗಳ ಪ್ರಕಾರ ಬಿಜೆಪಿ ಅಭ್ಯರ್ಥಿ ಗಂಗಾ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಕೆಲವರು ಯೋಚನೆ ಮಾಡುತ್ತಿದ್ದು, ಅದು ಕೂಡ ಅಸಾಧ್ಯ ಎನ್ನುವ ಹಂತದಲ್ಲಿದೆ. ಕಾರಣ ಈ ಕ್ಷೇತ್ರದಲ್ಲಿ ಅಂತಹ ಅಭ್ಯರ್ಥಿಗಳು ಯಾರು ಇಲ್ಲ, ಒಂದು ವೇಳೆ ಶಾಸಕ ಎಸ್.ಆರ್.ವಿಶ್ವನಾಥ್ ಮನಸ್ಸು ಮಾಡಿ, ಇದನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡು ಬರುತ್ತಾರೆ ಎನ್ನುವುದು ಊಹೆಗಳು ಕೂಡ ಸ್ವಲ್ಪ ಕಡಿಮೆಯೇ. ಹಾಗಾಗಿ ತ್ರಿವೇಣಿ ಅವಿರೋಧ ಆಯ್ಕೆಯಾಗುವ ಎಲ್ಲಾ ನಿರೀಕ್ಷೆಗಳು ಹೆಚ್ಚಾಗಿ ಕಂಡು ಬರುತ್ತಿವೆ.  ಇನ್ನೂ ಶಾಸಕರು ಪಂಚಾಯಿತಿ ವಿಷಯದಕ್ಕೆ ಎಂಟ್ರಿ ಆಗುವುದಿಲ್ಲ ಎನ್ನುವುದಕ್ಕೆ ಹಲವಾರು ಕಾರಣಗಳಿವೆ ಅವುಗಳಲ್ಲಿ ಕೆಲವು ಪ್ರಮುಖವಾಗಿವೆ, ಈಗಾಗಲೇ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮಗನ ಮದುವೆ ಫಿಕ್ಸ್ ಆಗಿದ್ದು, ಮದುವೆ ಗಲಾಟೆ ಒಂದೆಡೆಯಾದರೆ, ಇನ್ನೊಂದೆಡೆ ಲೋಕಸಭಾ ಚುನಾವಣೆಗೆ ಇದು ಅಡ್ಡಿಯಾಗಬಹುದೆಂಬ ಉದ್ದೇಶದಿಂದ ಸಂಘಟನೆ ವಿಚಾರಕ್ಕೆ ಸಂಬಂಧಿಸಿ ಶಾಸಕರು ಈ ಚುನಾಚಣೆಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಅದು ಅಲ್ಲದೆ ಬಚ್ಚೇಗೌಡರ ಅಳಿಯನಾದ ಜಿ.ಎನ್. ನರಸಿಂಹಮೂರ್ತಿ ಇದರಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಶಾಸಕ ಎಸ್.ಆರ್.ವಿಶ್ವನಾಥ್ ಇದರ ಕಡೆ ತಲೆ ಹಾಕಿಯೂ ಮಲಗುವುದಿಲ್ಲ ಎಂದು ಕೆಲವು ಊಹಾಪೋಹಗಳ ಮೂಲಕ ಹೇಳಬಹುದು.  ಇನ್ನೂ ಶಾಸಕ ಎಸ್.ಆರ್.ವಿಶ್ವನಾಥ್ ಎಂಟ್ರಿ ಆದರೆ ಅದರ ತಕ್ಕನಾಗೆ ಹಣ ಖರ್ಚು ಮಾಡುವ ದೊಡ್ಡ ತಿಮಿಂಗಲ ಈ ಪಂಚಾಯಿತಿಯಲ್ಲಿ ಇರುವುದು ಕಡಿಮೆಯೇ ಕೆಲವರು ಮನಸ್ಸು  ಮಾಡಿದರೂ ಅದು ಸಂಪೂರ್ಣವಾಗಿ ಯಶಸ್ವಿಯಾಗುವುದು ಅಸಾಧ್ಯ ಎಂದು ಕೆಲವರು ಹೇಳುತ್ತಾರೆ. ಹಾಗಾಗಿ ಈ ಬಾರಿ ತ್ರಿವೇಣಿನರಸಿಂಹಮೂರ್ತಿ ಅಧ್ಯಕ್ಷ ಸ್ಥಾನ ಅವಿರೋಧ ಆಗಬಹುದು ಎಂಬ ನಿರೀಕ್ಷೆ ಇದೆ. 

Click to comment

Trending

Exit mobile version