ಮೈಸೂರು

ಪ್ರಥಮ ಡಿಜಿಟಲ್ ಯೂನಿವರ್ಸಿಟಿಯಾಗಲು ಪಣತೊಟ್ಟ ಮೈಸೂರು ವಿವಿ

Published

on

ಮೈಸೂರು, ಡಿಸೆಂಬರ್ 30 : ಮುಂದಿನ 2 ವರ್ಷದೊಳಗೆ ಅಂದರೆ 2020ರ ವೇಳೆಗೆ ಮೈಸೂರು ವಿಶ್ವವಿದ್ಯಾಲಯವನ್ನು ಸಂಪೂರ್ಣ ಡಿಜಿಟಲೀಕರಿಸಲು ಸಿದ್ಧತೆ ನಡೆಸಿದೆ. ಈ ಮೂಲಕ ರಾಜ್ಯದ ಮೊದಲ ಪರಿಪೂರ್ಣ ಡಿಜಿಟಲೀಕರಣಗೊಂಡ ವಿ.ವಿ ಇದಾಗಲಿದೆ.

ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಕನಸಿಗೆ ಪೂರಕವಾಗಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಡಿಜಿಟಲ್ ಯೂನಿವರ್ಸಿಟಿಯಾಗುವತ್ತ ದಾಪುಗಾಲು ಇರಿಸಿದೆ. ರಾಜ್ಯದ ಪ್ರಪ್ರಥಮ ವಿಶ್ವವಿದ್ಯಾನಿಲಯವೆಂಬ ಪ್ರತಿಷ್ಠೆ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯ 2020 ರ ವೇಳೆಗೆ ಪ್ರಥಮ ಡಿಜಿಟಲ್ ಯೂನಿವರ್ಸಿಟಿಯಾಗಲು ಪಣತೊಟ್ಟಿದೆ.

ಕೆಎಸ್‌ಓಯು ನಲ್ಲಿ ಎಂಬಿಎ, ಬಿಎಡ್ ಕೋರ್ಸ್ ಗೆ ಶೀಘ್ರ ಅರ್ಜಿ ಆಹ್ವಾನ

ನೂತನ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಡಿಜಿಟಲ್ ಯೂನಿವರ್ಸಿಟಿ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ಕೈಗೊಳ್ಳಬೇಕಾಗಿರುವ ರೂಪುರೇಷೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.

ಕೇಂದ್ರ ಸರ್ಕಾರವು ‘ಡಿಜಿಟಲ್‌ ಇಂಡಿಯಾ’ ಅಭಿಯಾನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಕಾಣಿಕೆಯೂ ಇರಬೇಕು ಎಂಬ ಆಶಯ ಇದರಲ್ಲಿ ಅಡಗಿದೆ.

ಶೈಕ್ಷಣಿಕ, ಆಡಳಿತ, ಪ್ರಕಟಣ ವಿಭಾಗಗಳು ಸೇರಿದಂತೆ ವಿ.ವಿ.ಯ ಎಲ್ಲ ಪ್ರಕ್ರಿಯೆಗಳನ್ನು ಆನ್‌ಲೈನ್‌ ಮೂಲಕವೇ ನಡೆಸುವಂತೆ ಸಿದ್ಧತೆ ನಡೆಸಬೇಕಿದೆ ಎಂದು ಪ್ರಸ್ತಾಪಿಸಲಾಯಿತು.

ಮೈಸೂರು ಮುಕ್ತ ವಿವಿಗೆ ಮರುಜೀವ: ಹೊಸ ಕೋರ್ಸ್ ಗೆ ಅರ್ಜಿ ಆಹ್ವಾನ

ಕುಲಪತಿ ಪ್ರೊ.ಹೇಮಂತಕುಮಾರ್‌ ಮಾತನಾಡಿ, ಡಿಜಿಟಲ್‌ ವಿಶ್ವವಿದ್ಯಾಲಯದ ಕನಸು ಶೀಘ್ರವೇ ಈಡೇರಲಿದೆ. ಆಡಳಿತದ ಪ್ರತಿ ಹಂತವನ್ನೂ ‘ಇ ಪದ್ಧತಿ’ಗೆ ಅಳವಡಿಸಿಕೊಳ್ಳುವ ಯೋಜನೆ ಇದಾಗಲಿದೆ. ಗುಮಾಸ್ತರಿಂದ ಹಿಡಿದು, ಉಪ ಕುಲಸಚಿವ, ಕುಲಸಚಿವ, ಕುಲಪತಿಯವರೆಗೂ ಕಾಗದ ರಹಿತ ಆಡಳಿತ ನಡೆಸುವುದು ಇದರ ಸ್ವರೂಪವಾಗಲಿದೆ. ಇಷ್ಟೇ ಅಲ್ಲದೇ, ಶೈಕ್ಷಣಿಕ ಹಂತದಲ್ಲೂ ಶಿಕ್ಷಕರು, ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಪ್ರತಿಕ್ರಿಯಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅವರು ಮಾಹಿತಿ ನೀಡಿದರು.

ಮೈಸೂರು ವಿವಿಯ ಮಾನಸಗಂಗೋತ್ರಿ ಕ್ಯಾಂಪಸ್ ನಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣದ ಜತೆಗೆ ಸಂಚಾರಕ್ಕೆ ಅನುಕೂಲವಾಗುವಂತೆ ಇ-ಕಾರ್ಟ್ ‘ ವ್ಯವಸ್ಥೆ ಜಾರಿಗೂ ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ.

ಯುಜಿಸಿ ಮಾನ್ಯತೆ ಪಡೆದ ಕೆಎಸ್‌ಒಯುನ 17 ಕೋರ್ಸ್‌ಗಳು ಯಾವುವು?

ಕ್ಯಾಂಪಸ್ ನ ಮೂರು ಮುಖ್ಯದ್ವಾರವಾದ ಸಿಇ ಪ್ರವೇಶ, ಕುವೆಂಪು ಪ್ರತಿಮೆ ಪ್ರವೇಶ ಹಾಗೂ ಐಒಇ ಪ್ರವೇಶ ದ್ವಾರದ ಬಳಿ ಮೂರು ಇ-ಕಾರ್ಟ್ ವಾಹನದ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಉದ್ದೇಶಿತ ಇ-ಕಾರ್ಟ್ ನ ಪ್ರತಿ ವಾಹನದಲ್ಲೂ 8 ಮಂದಿ ಏಕಕಾಲದಲ್ಲಿ ಪ್ರಯಾಣಿಸಬಹುದಾಗಿದೆ. ಕ್ಯಾಂಪಸ್ ಒಳಗಡೆ ಬಸ್ ಸಂಚಾರ ಸ್ಥಗಿತಗೊಂಡಿರುವ ಕಾರಣ ವಾಹನ ವ್ಯವಸ್ಥೆಗೆ ಬೇಡಿಕೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ವಿವಿ ಇ-ಕಾರ್ಟ್ ವ್ಯವಸ್ಥೆಗೆ ಮುಂದಾಗಿದೆ.

Click to comment

Trending

Exit mobile version