ಸಿನಿಮಾ

ಜಪಾನ್​ನಲ್ಲೂ ರಾಕಿಭಾಯ್ ಹವಾ..!

Published

on

ಟೋಕಿಯೋ: ನ್ಯಾಷನಲ್ ಸ್ಟಾರ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಐವತ್ತು ದಿನಗಳತ್ತ ದಾಪುಗಾಲಿಡುತ್ತಿದೆ. ಅಲ್ಲದೇ ಕೆಜಿಎಫ್ ಸಿನಿಮಾ ನೆರೆಯ ಪಾಕಿಸ್ತಾನದಲ್ಲೂ ಅಬ್ಬರಿಸಿದ್ದು ಈಗ ಹಳೆಯ ಸುದ್ದಿಯಾಗಿದೆ. ಇದೀಗ ಲೇಟೆಸ್ಟ್​ ನ್ಯೂಸ್​ ಏನಪ್ಪ ಅಂದರೆ ಕೆಜಿಎಫ್​ ಸಿನಿಮಾ ಜಪಾನ್​ನಲ್ಲೂ ಸಖತ್​ ಸದ್ದು ಮಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಜಪಾನ್​ನ ಚಿತ್ರಮಂದಿರವೊಂದರಲ್ಲಿ ಕೆಜಿಎಫ್ ಚಿತ್ರದ ಪ್ರದರ್ಶನ ಜೋರಾಗಿ ನಡೆಯುತ್ತಿತ್ತು. ಈ ವೇಳೆ ಅಲ್ಲಿನ ಕನ್ನಡಾಭಿಮಾನಿಗಳು ಯಶ್​ ಜೊತೆ ವಿಡಿಯೋ ಕಾಲಿಂಗ್​ ಮೂಲಕ ಮಾತನಾಡಿದ್ದಾರೆ. https://twitter.com/YashFC/status/1089510792997695491ಇನ್ನೂ ಇದೇ ವೇಳೆ ಜಪಾನ್​ ನಾಗರಿಕರೂ ಕೂಡ ಯಶ್​ಗೆ ವಿಶ್​ ಮಾಡಿದ್ದು ವಿಶೇಷವಾಗಿತ್ತು. ಇನ್ನೂ ಯಶ್​ ಅವರ ನನ್ನ ರಕ್ತಾನೂ ಕೆಂಪಗೇ ಇದೆಯಲ್ಲೋ ಅನ್ನೋ ಡೈಲಾಗ್​ ಹೊಡಿಬೇಕು ಅಂತಾ ಅಲ್ಲಿದ್ದವರು ಕೋರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಯಶ್​ ಡೈಲಾಗ್​ ಹೊಡೆದು ಫ್ಯಾನ್ಸ್​ಗೆ ಥ್ಯಾಂಕ್ಸ್​ ಹೇಳಿದರು. ಈ ದೃಶ್ಯಗಳನ್ನು ಅಭಿಮಾನಿಯೊಬ್ಬರು ಮೊಬೈಲ್​ ಕ್ಯಾಮರಾದಲ್ಲಿ ಸೆರೆಹಿಡಿದ್ದಿದ್ದಾರೆ. ಮೂರು ನಿಮಿಷ ಈ ವಿಡಿಯೋವನ್ನು ಯಶ್​ ಪ್ಯಾನ್​ ಕ್ಲಬ್​ ಸೋಶಿಯಲ್​ ಮಿಡಿಯಾದಲ್ಲಿ ಅಪ್​ಲೋಡ್​ ಮಾಡಿದೆ.

Click to comment

Trending

Exit mobile version